Advertisement

ಶಿಕ್ಷಣ ವಲಯಕ್ಕಾಗಿ ನಡೆಸುವ ವೆಚ್ಚ ಮುಂದಿನ ಜನಾಂಗದ ಏಳಿಗೆಗೆ ಮೂಲ ಬಂಡವಾಳ: ಕಂದಾಯ ಸಚಿವ

07:31 PM Sep 22, 2020 | mahesh |

ಕಾಸರಗೋಡು: ಶಿಕ್ಷಣ ವಲಯಕ್ಕಾಗಿ ನಡೆಸುವ ವೆಚ್ಚ ಮುಂದಿನ ಜನಾಂಗದ ಏಳಿಗೆಗೆ ಮೂಲ ಬಂಡವಾಳ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಪನತ್ತಡಿ ಗ್ರಾಮ ಪಂಚಾಯತ್‌ನ ಪ್ರಾಂದರ್ಕಾವ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ರಾಜ್ಯ ಸರಕಾರವು ಸಾರ್ವಜನಿಕ ಶಿಕ್ಷಣ ಯಜ್ಞ ಮೂಲ ಸೌಲಭ್ಯ ನಿಧಿಯಿಂದ ಒಂದು ಕೊಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

5 ವರ್ಷಗಳ ಅವಧಿಯಲ್ಲಿ ಕಾಂಞಂಗಾಡ್‌ ವಿಧಾನಸಭೆ ವ್ಯಾಪ್ತಿಯಲ್ಲಿ ಶಾಸಕರ ನಿಧಿಯಿಂದ 10 ಕೋಟಿ ರೂ.ವನ್ನು ಶಿಕ್ಷಣ ವಲಯಕ್ಕಾಗಿ ಮಾತ್ರ ವೆಚ್ಚ ಮಾಡಲಾಗಿದೆ. ಜೊತೆಗೆ ಕಿಫ್‌ ಬಿ ಮುಖಾಂತರ 40 ಕೋಟಿ ರೂ.ನ ಚಟುವಟಿಕೆಗಳು ಇಲ್ಲಿ ನಡೆದಿವೆ. ಇವು ಮುಂದಿನ ಜನಾಂಗದ ಶೈಕ್ಷಣಿಕ ಉನ್ನತಿಗೆ ತಳಹದಿಯಾಗಲಿವೆ ಎಂದರು.

ಪ್ಲಾಸ್ಟಿಕ್‌ ನಿರ್ಮೂಲನ ಕಾರ್ಯಕ್ರಮದ ಅಂಗವಾಗಿ ಪನತ್ತಡಿ ಗ್ರಾಮ ಪಂಚಾಯತ್‌ ವತಿಯಿಂದ ತಯಾರಿಸಲಾದ ಬಟ್ಟೆ ಚೀಲ ವಿತರಣೆಯನ್ನು ಸಚಿವ ನಡೆಸಿದರು. ಪಂಚಾಯತ್‌ ಅಧ್ಯಕ್ಷ ಪಿ.ಜಿ.ಮೋಹನನ್‌ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಪಿ. ರಾಜನ್‌, ಜಿಲ್ಲಾ ಪಂಚಾಯತ್‌ ಸದಸ್ಯರಾದ ಎಂ. ನಾರಾಯಣನ್‌, ಪದ್ಮಾವತಿ, ಪನತ್ತಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಕೆ. ಹೇಮಾಂಬಿಕಾ, ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು, ಸಿಬಂದಿ ವೃಂದದವರು ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಸುನಿಲ್‌ ಕುಮಾರ್‌ ವರದಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next