ನವದೆಹಲಿ: ಪ್ರಸಕ್ತ ಕ್ಯಾಲೆಂಡರ್ ವರ್ಷಕ್ಕಾಗಿ ಮೂಡೀಸ್ ಇನ್ವೆಸ್ಟರ್ ಸರ್ವಿಸ್ (Moody’s Investors Service ) ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ನಿರೀಕ್ಷೆಯನ್ನು ಶೇ.7.7ರಿಂದ ಶೇ.7ಕ್ಕೆ ತಗ್ಗಿಸಿದೆ.
ಜಗತ್ತಿನಾದ್ಯಂತ ಮತ್ತೆ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಆತಂಕ ಇರುವಂತೆಯೇ ಈ ಬೆಳವಣಿಗೆ ನಡೆದಿದೆ.
ಸೆಪ್ಟೆಂಬರ್‌ನಲ್ಲಿ ಮೂಡೀಸ್ ದೇಶದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಶೇ.8.8ರಿಂದ ಶೇ.7.7ಕ್ಕೆ ಇಳಿಕೆ ಮಾಡಿತ್ತು. 2023ರಲ್ಲಿಯೂ ಅರ್ಥ ವ್ಯವಸ್ಥೆಯ ಬೆಳವಣಿಗೆ ಶೇ.4.8ಕ್ಕೆ ಇಳಿಕೆ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದೆ.
2024ರಲ್ಲಿ ಬೆಳವಣಿಗೆ ಪ್ರಮಾಣ ಶೇ.6.4ಕ್ಕೆ ಏರಿಕೆಯಾಗಲಿದೆ ಎಂದೂ ಹೇಳಿದೆ. ಜಗತ್ತಿನಾದ್ಯಂತ 2023ರಲ್ಲಿ ಪ್ರಮುಖ ದೇಶಗಳ ಅರ್ಥ ವ್ಯವಸ್ಥೆ ಬೆಳವಣಿಗೆ ದರ ಕುಗ್ಗಲಿದೆ ಎಂದೂ ಹೇಳಿದೆ.