Advertisement
ಕಳೆದ ವರ್ಷ ಮಳೆ ಉತ್ತಮವಾಗಿ ಬೀಳದೆ ಇದ್ದರೂ ಮುಂಗಾರು ಬೆಳೆಗೆ ಯಾವುದೇ ಧಕ್ಕೆಯಾಗಿರಲಿಲ್ಲ. ಆದರೆ ಹಿಂಗಾರು ಬೆಳೆಗೆ ನೀರಿನ ಕೊರತೆಯನ್ನು ಕಾಣಬೇಕಾಯಿತು.ರೈತರು ಜಮೀನನ್ನು ಉಳುಮೆ ಮಾಡಿ ಬೆಳೆ ಬಿತ್ತನೆ ಮಾಡಲು ಭೂಮಿ ಹದ ಮಾಡಿಕೊಳ್ಳಲು ತೊಡಗಿರುವುದು ಕಂಡ ಬಂತು. ಕೃಷಿ ಇಲಾಖೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲು ಎಲ್ಲ ರೀತಿಯ ಕ್ರಮ ಕೈಗೊಂಡು ಈಗಾಗಲೇ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಕಾರಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
ಎಪ್ರಿಲ್ ಅಂತ್ಯದ ವೇಳೆಗೆ ವಾಡಿಕೆಯಂತೆ 26 ಮಿ.ಮೀ.ನಷ್ಟು ಮಳೆಯಾಗಬೇಕಾಗಿತ್ತು ಆದರೆ ಈ ಬಾರಿ ಎಪ್ರಿಲ್ ತಿಂಗಳಲ್ಲಿ ಮಳೆಯಾಗಿಲ್ಲ. ಮೇ ತಿಂಗಳಲ್ಲಿ ವಾಡಿಕೆಯಂತೆ 159 ಮಿ.ಮೀ.ನಷ್ಟು ಮಳೆಯಾಗಬೇಕಾಗಿದ್ದು ಕಳೆದ ವರ್ಷ 105 ಮಿ.ಮೀ.ನಷ್ಟು ಬಂದಿದ್ದರೆ ಈ ಬಾರಿ ಈಗಾಗಲೇ 84.4 ಮಿ.ಮೀ.ರಷ್ಟು ಮಳೆಯಾಗಿದೆ. ಮುಂದಿನ ವಾರದಲ್ಲಿ ಹೆಚ್ಚು ಮಳೆಯನ್ನು ನಿರೀಕ್ಷಿಸಲಾಗಿದೆ. ಒಟ್ಟು ಗುರಿ 18,250 ಹೆಕ್ಟೇರ್ 2016-17ನೇ ಸಾಲಿನಲ್ಲಿ ತಾಲೂಕಿ ನಲ್ಲಿ ಮುಂಗಾರು ಹಂಗಾಮಿನಲ್ಲಿ 18 ಸಾವಿರ ಹೆಕೆràರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಸುಮಾರು 17,750 ಹೆಕೆràರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ಈ ಬಾರಿ ಕುಂದಾಪುರ, ವಂಡ್ಸೆ ಹಾಗೂ ಬೈಂದೂರು ಹೋಬಳಿ ಸೇರಿದಂತೆ 18,250 ಹೆಕ್ಟೇರ್ ಗುರಿಯನ್ನು ಹೊಂದಲಾಗಿದೆ. ಒಟ್ಟು 60,225 ಟನ್ ಅಕ್ಕಿ ಉತ್ಪಾದನೆಯ ನಿರೀಕ್ಷೆ ಹೊಂದಲಾಗಿದೆ.
Related Articles
ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಂಡು ಬಂದಿದೆ. ಕೃಷಿ ವೃತ್ತಿಯನ್ನು ಮಾಡವವರ ಸಂಖ್ಯೆ ಕ್ಷೀಣಿಸುತ್ತಿದ್ದು ರೈತರು ಬಹುತೇಕ ಕೃಷಿ ಯಂತ್ರಗಳತ್ತ ಮುಖಮಾಡಿದ್ದಾರೆ. ಯಾಂತ್ರಿಕ ಕೃಷಿ ಪದ್ಧತಿಯನ್ನು ಪ್ರತಿ ಗ್ರಾಮದಲ್ಲಿ ಇಂದು ಕಾಣಬಹುದಾಗಿದೆ.
Advertisement
ಬಿತ್ತನೆ ಬೀಜ ಪೂರೈಕೆಕೃಷಿ ಇಲಾಖೆಯ ಮೇ 25ರ ಮಾಹಿತಿಯಂತೆ ತಾಲೂಕಿನ ಬೈಂದೂರು, ವಂಡ್ಸೆ ಹಾಗೂ ಕುಂದಾಪುರ ರೈತ ಸಂಪರ್ಕ ಕೇಂದ್ರಗಳ ಮೂಲಕ ಈಗಾಗಲೇ ರೈತರಿಗೆ ಭತ್ತದ ಬೀಜ ಪೂರೈಕೆಯಾಗಿದೆ. ಈ ಭಾಗದಲ್ಲಿ ಪ್ರಾಮುಖ್ಯವಾಗಿ ಎಂಓ4 ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಒಟ್ಟು 665 ಕ್ವಿಂಟಾಲ್ ಬಿತ್ತನೆ ಬೀಜದ ಪೂರೈಕೆಯಾಗಿದೆ. ಕಳೆದ ವರ್ಷ ಸುಮಾರು 2,522 ಫಲಾನುಭವಿಗಳಿಗೆ 1011.33 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ಪೂರೈಕೆ ಮಾಡಲಾಗಿತ್ತು. ರೈತರಿಗೆ ಅನೇಕ ಯೋಜನೆಯಡಿ ಪವರ್ ಟಿಲ್ಲರ್, ಟ್ರಾÂಕ್ಟರ್, ರೀಪರ್, ವೀಡರ್, ಟಾರ್ಪ್‌ಲ್‌ಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗಿದೆ. ತಾಲೂಕಿನಲ್ಲಿ ಈ ಬಾರಿ ಸುಮಾರು 18,250 ಹೆಕ್ಟರ್‌ನಲ್ಲಿ ಭತ್ತ ಬೆಳೆಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಹಿಂದಿನ ಬಾರಿ ಮಳೆ ಕಡಿಮೆ ಇದ್ದರೂ ಮುಂಗಾರು ಬೆಳೆಗೆ ಯಾವುದೇ ಧಕ್ಕೆ ಯಾಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಹಿಂಗಾರು ಕೃಷಿಯಲ್ಲಿ ಹಿನ್ನಡೆಯನ್ನು ಕಂಡುಕೊಳ್ಳಲಾಗಿದೆ. ಈಗಾಗಲೇ ಮುಂಗಾರು ಕೃಷಿಗೆ ರೈತರಿಗೆ ಬಿತ್ತನೆ ಬೀಜವನ್ನು ಪೂರೈಸಲಾಗಿದೆ. ಅಲ್ಲದೇ ವಿವಿಧ ಯೋಜನೆಯಡಿ ಕೃಷಿ ಯಂತ್ರೋಪ ಕರಣಗಳನ್ನು ನೀಡಲಾಗಿದೆ. ವಿಶೇಷ ವಾಗಿ ಈ ಬಾರಿ ಸರಕಾರ ಕೃಷಿ ಭಾಗ್ಯ ಯೋಜನೆಯನ್ನು ಕರಾವಳಿ ಪ್ರದೇಶಕ್ಕೆ ನೀಡಿ ರುವುದರಿಂದ ರೈತರು ಹೆಚ್ಚು ಕೃಷಿ ಚಟು ವಟಿಕೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
-ವಿಟಲ ರಾವ್, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಕುಂದಾಪುರ. – ಉದಯ ಆಚಾರ್ ಸಾಸ್ತಾನ ಚಿತ್ರ: ರಾಜೇಶ್ ಕೊರವಡಿ