Advertisement
ಕಳೆದ ವರ್ಷ ಕೇಂದ್ರ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದ ದಂತೆ ಸ್ಮಾರ್ಟ್‌ಗ್ರಿಡ್ ಯೋಜನೆ ಆರಂಭಿಸಲಾಗಿದ್ದು, ಅದರಂತೆ ಮೊದಲ ಬಾರಿಗೆ ಮೈಸೂರಿನಲ್ಲಿ ಸ್ಮಾರ್ಟ್‌ಗ್ರಿಡ್ ಯೋಜನೆಯನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಗ್ರಿಡ್ ಯೋಜನೆಯನ್ನು ಮೈಸೂರಿನ ಜತೆಗೆ ಹುಬ್ಬಳ್ಳಿ, ಬೆಂಗಳೂರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯಾಪ್ತಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ ಎಂದರು.
Related Articles
Advertisement
ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಶೇ.30 ಅನುದಾನ ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಗ್ರಾಹಕರಿಗೆ ಯಾವುದೇ ಹೊರೆಯಾಗುವುದಿಲ್ಲ. ಬದಲಿಗೆ ಹೆಚ್ಚುವರಿ ಹಣವನ್ನು ಗ್ರಾಹಕರಿಂದ ಹಂತ ಹಂತವಾಗಿ ವಿದ್ಯುತ್ ಶುಲ್ಕದೊಂದಿಗೆ ವಸೂಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಸೆಸ್ಕ್ ಕಚೇರಿಗೆ ಭೇಟಿ ನೀಡಿದ ಅವರು ಸ್ಮಾರ್ಟ್ ಗ್ರಿಡ್ ಯೋಜನೆಯ ಕಾರ್ಯ ಚಟುವಟಿಕೆ, ತಂತ್ರಜಾnನದ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದರು. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಿ.ಕಿರಣ್, ಸ್ಮಾರ್ಟ್‌ಗ್ರಿಡ್ ಯೋಜನೆ ಎಂಜಿನಿಯರ್ ಅಫ್ತಾಬ್ ಪಾಷಾ ಇತರರು ಇದ್ದರು.
ಇತರೆಡೆಗೂ ವಿಸ್ತರಣೆ: ವಿದ್ಯುತ್ ಬಳಕೆಯಲ್ಲಿ ಗ್ರಾಹಕರ ಶಿಸ್ತು ಅತ್ಯಂತ ಮುಖ್ಯವಾಗಲಿದ್ದು, ಈ ಹಿನ್ನೆಲೆ ಸ್ಮಾರ್ಟ್‌ಗ್ರಿಡ್ ಅತ್ಯುತ್ತಮ ಯೋಜನೆಯಾಗಿದೆ. ಈ ಯೋಜನೆ ಅಳವಡಿಕೆಯಿಂದ ಯಾವುದೇ ಗ್ರಾಹಕ ನಿಗದಿಗಿಂತ ಹೆಚ್ಚುವರಿಯಾಗಿ ವಿದ್ಯುತ್ ಬಳಕೆ, ಕಳವು ಮಾಡುವುದು ಸೇರಿದಂತೆ ಕಾನೂನು ಬಾಹಿರವಾಗಿ ವಿದ್ಯುತ್ ಬಳಕೆ ಮಾಡಲು ಸಾಧ್ಯವಿಲ್ಲ.
ಒಂದೊಮ್ಮೆ ಈ ರೀತಿ ಮಾಡಿದ್ದೇ ಆದಲ್ಲಿ ಸ್ಥಳದಲ್ಲೇ ಈ ಬಗ್ಗೆ ಮಾಹಿತಿ ದೊರೆಯಲಿದ್ದು, ಇದರಿಂದ ಸಂಬಂಧಪಟ್ಟ ಗ್ರಾಹಕರಿಗೆ ದಂಡ ವಿಧಿಸಬಹುದಾಗಿದೆ. ಹೀಗಾಗಿ ಸ್ಮಾರ್ಟ್‌ಗ್ರಿಡ್ ಯೋಜನೆಯಿಂದ ಇಲಾಖೆಗೆ ಲಾಭ ದೊರೆಯುವ ಜತೆಗೆ ಗ್ರಾಹಕರಿಗೂ ಉಪಯುಕ್ತವಾಗಲಿದೆ. ಹೀಗಾಗಿ ಬೆಸ್ಕಾಂ, ಮೆಸ್ಕಾಂ ಸೇರಿದಂತೆ ಇತರೆ ಕಂಪನಿಗಳಿಗೆ ವಿಸ್ತರಿಸಲು ಟೆಂಡರ್ ಕರೆಯಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಬರಗಾಲದ ಹಿನ್ನೆಲೆ ವಿದ್ಯುತ್ ಉತ್ಪಾದನೆಯ ಜಲ ಸ್ಥಾವರಗಳು ಬತ್ತಿ ಹೋಗಿದೆ. ಆದರೂ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಲು 1 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸರ್ಕಾರ ಸ್ವಾವಲಂಬಿಯಾಗಲಿದ್ದು, ಬೇರೆ ರಾಜ್ಯಗಳಿಗೆ ವಿದ್ಯುತ್ ಪೂರೈಕೆ ಮಾಡಲಿದೆ.-ಡಿ.ಕೆ.ಶಿವಕುಮಾರ್, ಇಂಧನ ಸಚಿವ. ಸ್ಮಾರ್ಟ್‌ಗ್ರಿಡ್ ಯೋಜನೆ
* ಉತ್ತಮ ಗುಣಮಟ್ಟದ ಅಡಚಣೆ ರಹಿತ ವಿದ್ಯುತ್ ಸಿಗಲಿದೆ.
* ವಿದ್ಯುತ್ ವಿತರಣೆಯ ಸಮಗ್ರ ಮಾಹಿತಿ ಸಿಗುವುದರಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಸಮಸ್ಯೆ ನಿವಾರಣೆಯಾಗಲಿದೆ.
* ಗ್ರಾಹಕರು ತಮ್ಮ ಮನೆಯ ನಿರ್ದಿಷ್ಟ ಸಮಯದ ವಿದ್ಯುತ್ ಉಪಯೋಗವನ್ನು ಆನ್‌ಲೈನ್ ಮೂಲಕ ತಿಳಿಯಬಹುದು.
* ನಿಗದಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಗ್ರಾಹಕರಿಗೆ ಎಚ್ಚರಿಕೆ ನೀಡುವ ಜತೆಗೆ ದಂಡ ವಿಧಿಸಬಹುದು. ಇದರಿಂದ ವಿದ್ಯುತ್ ದುರ್ಬಳಕೆಯಾಗದು.
* ಮಾಪಕ ಬಿಲ್ ವಿತರಿಸಲು, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮತ್ತು ಮರು ಸಂಪರ್ಕ ಕಲ್ಪಿಸಲು ಸಿಬ್ಬಂದಿ ಅವಶ್ಯಕತೆ ಇಲ್ಲ.