Advertisement

ಸೆ.29ರಿಂದ ರಾಷ್ಟ್ರಮಟ್ಟದ ಸಿನಿಮಾಗಳ ಪ್ರದರ್ಶನ

11:21 PM Sep 18, 2019 | Team Udayavani |

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸುವ ಚಲನಚಿತ್ರೋತ್ಸವ ಪ್ರದರ್ಶನಗಳು ಸೆ.29ರಿಂದ ಅ.3ರವರೆಗೆ ಐದು ದಿನ ನಡೆಯಲಿದ್ದು, ಸೆ.29ರಂದು ಬೆಳಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ಸಿಎಂ ಯಡಿಯೂರಪ್ಪ ಅವರು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಗಿರೀಶ್‌ ಬಿ.ಎನ್‌, ಇದೇ ಮೊದಲ ಬಾರಿಗೆ ಸಿನಿಮಾಸಕ್ತರ ಪ್ರತಿಭೆಗಳನ್ನು ಗುರುತಿಸಲು ಚಿತ್ರಕಥಾ ಕಾರ್ಯಾಗಾರ, ಕಿರು ಚಲನಚಿತ್ರಗಳ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

ಕಿರು ಚಿತ್ರಗಳ ಸ್ಪರ್ಧೆ ಆಯೋಜಿಸಿದ್ದು, 5 ನಿಮಿಷಗಳ ಅವಧಿಗೆ ಸೀಮಿತವಾಗಿ ನಿರ್ಮಿಸಿರುವ ಕಿರು ಚಲನಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಅತ್ಯುತ್ತಮ ಚಿತ್ರಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಗುವುದು ಎಂದರು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಸ್ವಂತ ನಿರ್ಮಾಣದ ಕಿರು ಚಲನಚಿತ್ರಗಳನ್ನು ಸೀಡಿಯಲ್ಲಿ ಅಳವಡಿಸಿ ಸೆ.25ರ ಸಂಜೆ 5 ಗಂಟೆಯೊಳಗಾಗಿ ಸೀಡಿಯನ್ನು ಉಪ ನಿರ್ದೇಶಕರ ಕಚೇರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತ್ರಿ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ರಾಘವೇಂದ್ರ ಎಸ್‌.ಜಿ., ಮೊ. 9964585008 ಸಂಪರ್ಕಿಸಬಹುದು ಎಂದರು.

ಆಹಾರ ಮೇಳ: ಈ ವರ್ಷವೂ ಆಹಾರ ಮೇಳವನ್ನು ಮೈಸೂರು ನಗರದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನ ಹಾಗೂ ಲಲಿತ ಮಹಲ್‌ ಪ್ಯಾಲೆಸ್‌ ಹೋಟೆಲ್‌ ಪಕ್ಕದ ಮುಡಾ ಮೈದಾನದಲ್ಲಿ ಸೆ.29ರಿಂದ ಅ.10ರವರೆಗೆ ಆಯೋಜಿಸ ಲಾಗಿದೆ. ಈ ಎರಡು ಸ್ಥಳಗಳಲ್ಲಿ ಸೆ.30 ರಿಂದ ಅ.10 ರವರೆಗೆ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಳಪಾಕ ಸ್ಪರ್ಧೆ ಮತ್ತು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಸವಿಭೋಜನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next