Advertisement

ಎಕ್ಸ್‌ಪ್ರೆಷನ್‌ ಅಮೂರ್ತ ಕಲಾಕೃತಿಗಳ ಪ್ರದರ್ಶನ

12:02 PM May 18, 2018 | |

ಬೆಂಗಳೂರು: ರಾಜ್ಯದ ಯುವ ಚಿತ್ರ ಕಲಾವಿದ ರಮೇಶ್‌ ತೆರದಾಳ ಅವರ ಇತ್ತೀಚಿನ ಕಲಾಕೃತಿಗಳ ಪ್ರದರ್ಶನವನ್ನು ವಸಂತ ನಗರದ ಆರ್ಟ್‌ ಹೌಜ್‌ ಕಲಾ ಗ್ಯಾಲರಿ ಆಯೋಜಿಸಿದೆ. 

Advertisement

ಸದಾ ಸ್ಪಷ್ಟರೂಪಗಳನ್ನೇ ಆಧರಿಸಿದ ಕಲಾಕೃತಿಗಳನ್ನು ರಚಿಸುತ್ತಾ ಬಂದಿದ್ದ ರಮೇಶ್‌ ಅವರು ಈ ಪ್ರದರ್ಶನದಲ್ಲಿ ಅಮೂರ್ತ ಕಲಾಕೃತಿಗಳನ್ನು ಇಟ್ಟಿದ್ದು, ತಮಗೆ ಸದಾ ಕಾಡುತ್ತಿದ್ದ ಅಕ್ವೇರಿಯಂ, ಪಕ್ಷಿ, ಪ್ರಾಣಿಗಳನ್ನೇ ವಿಷಯಗಳನ್ನಾಗಿ ಬಳಸಿಕೊಂಡಿರುವುದು ಗಮನ ಸೆಳೆಯುವಂತಿವೆ. 

ತಮ್ಮ ಕಲಾಕೃತಿಗಳ ಬಗ್ಗೆ ಗದಗ ಮೂಲದವರಾದ ರಮೇಶ್‌ ಅವರು ಪ್ರತಿಕ್ರಿಯಿಸಿದ್ದು ಹೀಗೆ, “ಪಾಶ್ಚಾತ್ಯ ಕಲಾವಿದರಾದ ಜಾಕ್ಸನ್‌ ಪೊಲಾಕ್‌ ಮತು ಆ್ಯಂಟೆನಿಯೊ ತಾಪಿಸ್‌ ಅವರ ಕಲಾಕೃತಿಗಳು ಕಳೆದ ಹದಿನೆಂಟು ವರ್ಷಗಳಿಂದಲೂ ಕಾಡುತ್ತಲೇ ಇತ್ತು.

ಅವರ ಅನೇಕ ಕಲಾಕೃತಿಗಳಿಂದ ಪ್ರಭಾವಿತನಾಗಿ ಇತ್ತೀಚಿಗೆ ಹೊಸ ಶೈಲಿಯಲ್ಲಿ ಅಸ್ಪಷ್ಟವಾದ ಆಕೃತಿಗಳನ್ನು ವಿಭಿನ್ನ ಮೈವಳಿಕೆಗಳೊಂದಿಗೆ  ರಚಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ. ಈ ಪ್ರದರ್ಶನದ ವಿಶಿಷ್ಟತೆ ಏನೆಂದರೆ ಇದು ತಿರುಗಾಟ ಪ್ರದರ್ಶನವಾಗಿದ್ದು, ಇಲ್ಲಿ ಪ್ರದರ್ಶಿಸಲಾದ ಕಲಾಕೃತಿಗಳು ಮೇ 28ರಿಂದ ಜೂನ್‌ 15ರ ತನಕ ಬುದಾ ಪೆಸ್ಟ್‌ನಲ್ಲಿ ಪ್ರದರ್ಶನಗೊಳ್ಳಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next