Advertisement

Bidar: ಮೋದಿ ಸರ್ಕಾರದಲ್ಲಿ ಪಾರದರ್ಶಕತೆ ಆಡಳಿತ; ದೇಶದ ಅಭಿವೃದ್ಧಿಗೆ ಮೋದಿ ಅನಿವಾರ್ಯ

03:45 PM Apr 03, 2024 | Team Udayavani |

ಉದಯವಾಣಿ ಸಮಾಚಾರ
ಬೀದರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ 10 ವರ್ಷಗಳ ಅವ ಧಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ಆಶಾಭಾವ ಮೂಡಿಸಿದೆ.ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ದೇಶಕ್ಕೆ ಮೋದಿ ಮತ್ತೂಮ್ಮೆ ಅನಿವಾರ್ಯವಾಗಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ವರ್ಗಗಳಿಗೆ ಸಾಮಾಜಿಕ ಸುರಕ್ಷತಾ ಯೋಜನೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಒತ್ತು ಕೊಟ್ಟ ಪರಿಣಾಮ ದೇಶದ ಜನರ ಜೀವನದಲ್ಲಿ ಬದಲಾವಣೆ ಕಾಣುತ್ತಿದ್ದೇವೆ.

2014ರ ಮೊದಲು ಯೋಜನೆಗಳು ರೂಪುಗೊಂಡರೂ ಭ್ರಷ್ಟಾಚಾರ, ಪಾರದರ್ಶಕವಾಗಿ ಅನುಷ್ಠಾನ ಆಗುತ್ತಿರಲಿಲ್ಲ. ಆದರೆ, ಮೋದಿ ಸರ್ಕಾರದಲ್ಲಿ ಪಾರದರ್ಶಕತೆ ಆಡಳಿತದಿಂದಾಗಿ ಇಂದು ಗುರಿ ಸಾಧಿಸಲು ಸಾಧ್ಯವಾಗಿದೆ. ಗತಿ ಶಕ್ತಿ ಯೋಜನೆಯಿಂದಾಗಿ
ಪ್ರಧಾನಿಗಳು ಯೋಜನೆಗಳನ್ನು ಶಂಕುಸ್ಥಾಪನೆ ನೆರವೇರಿಸಿದ ಎರಡು ವರ್ಷದಲ್ಲೇ ಲೋಕಾರ್ಪಣೆ ಆಗಿದ್ದು, ಇದು ಯಾವ
ಕಾಲದಲ್ಲಿಯೂ ನಡೆದಿರಲಿಲ್ಲ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದು ಆರ್ಥಿಕವಾಗಿ ಬೆಳವಣಿಗೆ ಹೊಂದಿದ್ದು, ಇದರಿಂದ ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಮುದ್ರಾ ಯೋಜನೆಯಡಿ 46 ಕೋಟಿ ಜನರಿಗೆ 27 ಲಕ್ಷ ಕೋಟಿ ರೂ. ಸೌಲಭ್ಯ ನೀಡಲಾಗಿದ್ದು, ಈ ಮೂಲಕ ದೇಶದಲ್ಲಿ 54 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಾಗಿದೆ. ಕಾಂಗ್ರೆಸ್‌ ಟೀಕಿಸಿದ್ದ ಜನ-ಧನ ಖಾತೆಯನ್ನು 50 ಕೋಟಿ ಜನರು ತೆರೆದು ಸುಮಾರು 2.05 ಲಕ್ಷ ಕೋಟಿ ಹಣ ಜಮಾ ಮಾಡಿದ್ದಾರೆ. ಡಿಬಿಡಿ ಮೂಲಕ ನೇರವಾಗಿ ಫಲಾನುಭವಿಗಳಿಗೆ ಹಣ ಜಮೆಯಿಂದ 2 ಲಕ್ಷ ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಬಡವರಿಗಾಗಿ ಕೇವಲ 71 ಲಕ್ಷ ಮನೆ ನಿರ್ಮಾಣ ಆಗಿದ್ದರೆ, ಎನ್‌ಡಿಎ ಸರ್ಕಾರದ ಕಾಲಾವ ಧಿಯಲ್ಲಿ 4 ಕೋಟಿ ಮನೆಗಳು ಆಗಿವೆ. ಜೆಜೆಎಂ ಅಡಿ 14 ಕೋಟಿ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, 12 ಕೋಟಿ ಮನೆಗಳಿಗೆ ಶೌಚಾಲಯಗಳು ನಿರ್ಮಾಣ ಆಗಿದೆ. ಬೇಟಿ ಬಚಾವೋ- ಬೇಟಿ ಪಡಾವೋ ಕಾರ್ಯಕ್ರಮದಿಂದ ಲಿಂಗಾನುಪಾತ ಹೆಚ್ಚಳವಾಗಿದೆ. ಕೇವಲ 355 ಇದ್ದ ಸ್ಟಾರ್ಟ್‌ ಅಪ್‌ಗಳ ಸಂಖ್ಯೆ ಈಗ 1.25 ಲಕ್ಷಕ್ಕೆ ತಲುಪಿದೆ. 723 ಇದ್ದ ವಿಶ್ವವಿದ್ಯಾಲಯಗಳ ಸಂಖ್ಯೆ 1,113ಕ್ಕೆ ಹೆಚ್ಚಳವಾಗಿದೆ.

Advertisement

ಇದರಿಂದ ವಿಶ್ವದ ಅತಿ ದೊಡ್ಡ ಆರ್ಥಿಕತೆ ದೇಶಗಳ ಪಟ್ಟಿಯಲ್ಲಿ ಭಾರತ ಈಗ 11 ರಿಂದ 5ನೇ ಸ್ಥಾನಕ್ಕೆ ಬಂದಿದೆ ಎಂದು ಸರ್ಕಾರದ
ಸಾಧನೆ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಶರಣು ಸಲಗರ, ಸಿದ್ದು ಪಾಟೀಲ, ಎಂಎಲ್‌ಸಿ ರಘುನಾಥರಾವ್‌ ಮಲ್ಕಾಪುರೆ, ಬೀದರ ಕ್ಷೇತ್ರದ ಪ್ರಭಾರಿ ರಾಜಕುಮಾರ ಪಾಟೀಲ ತೇಲ್ಕೂರ್‌, ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌, ಪ್ರಮುಖರಾದ ಶಶಿ ಹೊಸಳ್ಳಿ, ಜಯಕುಮಾರ ಡಾಂಗೆ, ಕಿರಣ ಪಾಟೀಲ, ಪೀರಪ್ಪ ಯರನಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next