Advertisement

Farangipete; “ಶಕ್ತಿ ಪ್ರತೀಕ ಹನುಮಂತನಿಗೆ ವ್ಯಾಯಾಮವೇ ಪೂಜೆ’: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

12:25 AM Jan 27, 2024 | Team Udayavani |

ಬಂಟ್ವಾಳ: ಹನುಮಂತ ಶಕ್ತಿಯ ಪ್ರತೀಕ, ಭಕ್ತಿಯ ರೂಪವಾಗಿದ್ದು, ವ್ಯಾಯಾಮವೇ ಅವನಿಗೆ ಪೂಜೆಯಾಗಿದೆ ಎಂದು ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.

Advertisement

ಅವರು ಶುಕ್ರವಾರ ಫರಂಗಿಪೇಟೆ ವಿಜಯನಗರ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶಾಭಿ ಷೇಕದ ಧಾರ್ಮಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದರು. ಬೆಂಗಳೂರು ಬ್ರಹ್ಮಶ್ರೀ ಆನಂದ ಸಿದ್ಧಿ ಪೀಠದ ಸಂಸ್ಥಾಪಕ ಮಹರ್ಷಿ ಡಾ| ಆನಂದ ಗುರೂಜಿ ಸಂದೇಶ ನೀಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಸಾನ್ನಿಧ್ಯ, ಈ ಭಾಗದಲ್ಲಿ ಹನುಮಂತನ ಸಾನ್ನಿಧ್ಯ ಪವಿತ್ರವೆನಿಸಿಕೊಂಡಿದ್ದು, ಪಣತೊಟ್ಟು ನಿಂತಾಗ ಸುಂದರ ಆಲಯ ನಿರ್ಮಾಣ ಸಾಧ್ಯ ಎಂದರು.

ಶ್ರೀನಿವಾಸ ಶರ್ಮ ಶುಭ ಹಾರೈಸಿದರು. ವಜ್ರನಾಭ ಶೆಟ್ಟಿ ಅರ್ಕುಳಬೀಡು ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಜೆ. ಪಾಲೇಮಾರ್‌, ರಘು ಸಪಲ್ಯ ಮುಖ್ಯ ಅತಿಥಿಯಾಗಿದ್ದರು.

ಅಜಿತ್‌ ಚೌಟ ದೇವಸ್ಯ, ವಿಠಲ ಆಳ್ವ ಗರೋಡಿ, ಉಮೇಶ್‌ ಶೆಟ್ಟಿ ಬರ್ಕೆ, ಚಂದ್ರಶೇಖರ ಗಾಂಬೀರ ಹಾಗೂ ಪ್ರಭಾಕರ ಮಾಸ್ಟರ್‌ ಅವರನ್ನು ಸಮ್ಮಾನಿಸಲಾಯಿತು.

ಭುವನೇಶ್‌ ಪಚ್ಚಿನಡ್ಕ, ದೇವಸ್ಯ ಪ್ರಕಾಶ್ಚಂದ್ರ ರೈ, ದೇವಿಪ್ರಸಾದ್‌ ಶೆಟ್ಟಿ ಕೊಡಾ¾ಣ್‌, ಐತಪ್ಪ ಆಳ್ವ ಸುಜೀರುಗುತ್ತು, ಮಹಾಬಲ ಕೊಟ್ಟಾರಿ ಮುನ್ನೂರು ವೇದಿಕೆಯಲ್ಲಿದ್ದರು.

Advertisement

ತೇವು ತಾರಾನಾಥ ಕೊಟ್ಟಾರಿ ಸಮ್ಮಾನಿತರ ವಿವರ ನೀಡಿದರು. ಸದಾನಂದ ಆಳ್ವ ಕಂಪ ಸ್ವಾಗತಿಸಿದರು. ಕರುಣಾಕರ ಕೊಟ್ಟಾರಿ ವಂದಿಸಿದರು. ರಾಜೇಶ್‌ ಕೊಟ್ಟಾರಿ ಕಲ್ಲಡ್ಕ ನಿರ್ವಹಿಸಿದರು.

ಬ್ರಹ್ಮಕಲಶಾಭಿಷೇಕ
ಶುಕ್ರವಾರ ಬೆಳಗ್ಗೆ 10.05ರ ಸುಮೂಹೂರ್ತದಲ್ಲಿ ಶ್ರೀ ಆಂಜನೇಯ ದೇವರು ಹಾಗೂ ಶ್ರೀ ಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕವು ವೇ|ಮೂ| ಕೆ. ಮುರಳಿ ಭಟ್‌ ಕಲ್ಲತಡಮೆ ಅವರ ಪೌರೋಹಿತ್ಯದಲ್ಲಿ ನೆರವೇರಿತು.

 

Advertisement

Udayavani is now on Telegram. Click here to join our channel and stay updated with the latest news.

Next