Advertisement

ರೈಲ್ವೇಯಲ್ಲಿ ಸುಖಕರ ಪ್ರಯಾಣ

04:33 PM Aug 29, 2018 | Team Udayavani |

ಹೊಸದಿಲ್ಲಿ: ಶೀಘ್ರದಲ್ಲಿಯೇ ರಾಜಧಾನಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿನ ಪ್ರಯಾಣ ಮತ್ತಷ್ಟು ಆರಾಮದಾಯಕವಾಗಿರಲಿದೆ. ಜರ್ಕ್‌ ರಹಿತ ಪ್ರಯಾಣಕ್ಕೆ ಅಕ್ಟೋಬರ್‌ನಿಂದ 2 ಕೋಚ್‌ಗಳನ್ನು ಸಂಪರ್ಕಿಸಲು ಹೊಸ ಮಾದರಿಯ ವ್ಯವಸ್ಥೆ ಅಳವಡಿಸಲಾಗುತ್ತದೆ. ಸದ್ಯ ಹೊಸದಿಲ್ಲಿಯಿಂದ ಹೊರಡುವ ಶತಾಬ್ದಿ, ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಅದನ್ನು ಅಳವಡಿಸಲಾಗುತ್ತದೆ. ಡಿಸೆಂಬರ್‌ ಅಂತ್ಯದ ಒಳಗಾಗಿ ಎಲ್ಲಾ ಪ್ರಮುಖ ನಗರಗಳಿಂದ ಹೊರಡುವ ಪ್ರೀಮಿಯಂ ಟ್ರೈನ್‌ಗಳಲ್ಲಿಯೂ ಈ ವ್ಯವಸ್ಥೆ ಅಳವಡಿಕೆಯಾಗಲಿದೆ.

Advertisement

ಉತ್ತಮ ದರ್ಜೆಯ ಆಸನ ವ್ಯವಸ್ಥೆ ಸೇರಿದಂತೆ ಹಲವು ಆರಾಮಯಿದಾಯಕ ಸೌಲಭ್ಯ ನೀಡಲಾಗುತ್ತಿದೆ. ಅದಕ್ಕಾಗಿ “ಆಪ ರೇಷನ್‌ ಸ್ವಣ್‌ì’ ಜಾರಿಗೊಳಿಸಲಾಗುತ್ತಿದೆ. ಶುಚಿತ್ವ, ಸಮಯಪಾಲನೆ ಸೇರಿ ಹತ್ತು ಅಂಶಗಳ ಆಧಾರದಲ್ಲಿ 14 ರಾಜಧಾನಿ ಮತ್ತು 15 ಶತಾಬ್ದಿ ಎಕ್ಸ್‌ಪ್ರೆಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ತಿಂಗಳ  ಅಂತ್ಯಕ್ಕೆ ಅದು ಪೂರ್ಣಗೊಳ್ಳಲಿದೆ.

ಜತೆಗೆ ದುರ್ವಾಸನೆ ಮುಕ್ತ ಶೌಚಾಲಯ, ವಿಮಾನದಲ್ಲಿರುವಂತೆ ಫ್ಲಶ್‌ ವ್ಯವಸ್ಥೆ, ಉತ್ತಮ ದರ್ಜೆ ಮತ್ತು ವಿವಿಧ ಆಹಾರದ ಆಯ್ಕೆಗಳು ಇರುವ ಮೆನುಗಳನ್ನೂ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಕೆಲವು ಜಾರಿಯಾಗಿದ್ದು, ಇನ್ನು ಕೆಲವು ವರ್ಷಾಂತ್ಯದ ಒಳಗಾಗಿ ಪೂರ್ತಿಯಾಗಿ ಪ್ರಯಾಣಿಕರ ಬಳಕೆಗೆ ಸಿಗಲಿವೆ.

6000 ನಿಲ್ದಾಣಗಳಲ್ಲಿ ವೈಫೈ
ಮುಂದಿನ 6ರಿಂದ 8 ತಿಂಗಳೊಳಗಾಗಿ ಸುಮಾರು 6 ಸಾವಿರ ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಜತೆಗೆ, ಪ್ರತಿ ಲೋಕೋ ಮೋಟಿವ್‌ಗಳಲ್ಲಿ ಜಿಪಿಎಸ್‌ ಸಾಧನ ಅಳವಡಿಸಲೂ ನಿರ್ಧರಿಸಿದ್ದೇವೆ. ಆ ಮೂಲಕ ರೈಲು ಎಲ್ಲಿದೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next