Advertisement

ರೈಲ್ವೇಯಲ್ಲಿ ವಿನಿಮಯ ಸೇವೆ

12:30 AM Dec 31, 2018 | |

ಹೊಸದಿಲ್ಲಿ: ರೈಲುಗಳ ಮೇಲೆ ಜಾಹೀರಾತನ್ನು ನೀಡುವ ಕಂಪನಿಗಳು ಇನ್ನು ಮುಂದೆ ಇದಕ್ಕಾಗಿ ರೈಲ್ವೆ ಇಲಾಖೆಗೆ ಶುಲ್ಕ ತೆರಬೇಕಾಗಿಲ್ಲ. ಅದರ ಬದಲು ಇಲಾಖೆಗೆ ತಾನು ಜಾಹೀರಾತು ನೀಡಲಿರುವ ಉತ್ಪನ್ನ, ಸೇವೆಗಳನ್ನು ಉಚಿತವಾಗಿ ಪೂರೈಸಿದರೆ ಸಾಕು. “ವಿನಿಮಯ ವ್ಯವಸ್ಥೆ’ (ಬಾರ್ಟರ್‌ ವ್ಯವಸ್ಥೆ) ಮಾದರಿಯಲ್ಲಿ ಇಂಥ ಹೊಸ ಜಾಹೀರಾತು ಒಪ್ಪಂದಗಳನ್ನು ಮಾಡಿ ಕೊಳ್ಳಲು ರೈಲ್ವೆ ಇಲಾಖೆಯೀಗ ಮುಂದ್ದಾಗಿದೆ. ಇಂಥದ್ದೊಂದು ಹೊಸ ವಿಧಾನವನ್ನು ರೈಲ್ವೆ ಮಂಡಳಿಯ ಟ್ರಾನ್ಸ್‌ಫಾರ್ಮೇಶನ್‌ ಸೆಲ್‌ ವತಿ ಯಿಂದ ರೂಪುಗೊಂಡಿರುವ ಈ ಹೊಸ ಯೋಜ ನೆಯನ್ನು ಮೊದಲಿಗೆ ಪ್ರಾಯೋಗಿಕ ವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

Advertisement

ಆಯ್ಕೆ ಪ್ರಕ್ರಿಯೆ: ಜಾಹೀರಾತು ಪ್ರಕಟಿಸ ಬಯಸುವ ಕಂಪನಿಯು ಕೋಚಿಂಗ್‌ ಡಿಪಾರ್ಟ್‌ಮೆಂಟ್‌ ಅಧಿಕಾರಿಗೆ (ಸಿಡಿಒ) ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ವಿವರಗಳನ್ನು ರೈಲ್ವೆ ಇಲಾಖೆಯ ಜಾಲತಾಣದಲ್ಲಿ 21 ದಿನಗಳ ಕಾಲ ಪ್ರದರ್ಶಿಸಲಾಗುತ್ತದೆ. ಇದೇ ಉತ್ಪನ್ನ ಅಥವಾ ಸೇವೆಗಳನ್ನು ನೀಡುವ ಇತರ ಕಂಪನಿಗಳಿಗೂ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗುತ್ತದೆ. ಹೆಚ್ಚಿನ ಕಂಪನಿಗಳು ಮುಂದೆ ಬಂದಲ್ಲಿ, ಅವುಗಳಲ್ಲೊಂದನ್ನು ಜಾಹೀರಾತಿಗಾಗಿ ಆಯ್ಕೆ ಮಾಡಲಾಗುತ್ತದೆ. 

 ಕೆಲಸ ಮಾಡುತ್ತದೆ?: ಸೋಪ್‌ ತಯಾರಿಕಾ ಕಂಪನಿಯೊಂದು ಜಾಹೀರಾತಿಗಾಗಿ ಆಯ್ಕೆಯಾದಲ್ಲಿ, ಆ ಕಂಪನಿ ಜಾಹೀರಾತು ಶುಲ್ಕದ ಬದಲಿಗೆ  ರೈಲು ನಿಲ್ದಾಣಗಳ ಅಥವಾ ಅಧಿಕಾರಿಗಳ ಕೊಠಡಿಗಳ ವಾಷ್‌ ರೂಂಗಳಲ್ಲಿ ಬಳಕೆಯಾಗುವಷ್ಟು ಸೋಪುಗಳನ್ನು ನೀಡಬೇಕಿರುತ್ತದೆ. ಇಂಟರ್ನೆಂಟ್‌ ಮುಂತಾದ ಸೇವೆಗಳನ್ನು ನೀಡುವ ಕಂಪನಿಗಳಿಗೂ ಇದೇ ನಿಯಮ ಅನ್ವಯ.

Advertisement

Udayavani is now on Telegram. Click here to join our channel and stay updated with the latest news.

Next