Advertisement
ಹಣದ ಆಮಿಷಕ್ಕೆ ಒಳಗಾಗಿದ್ದ ನಾಗರಾಜು, ಉದ್ಯಮಿ ಉಮೇಶ್ ಸೇರಿದಂತೆ ಹಲವರನ್ನು ಸುಲಿಗೆ ಮಾಡಿ ರದ್ದಾದ 500, 1000 ಮುಖಬೆಲೆಯ ನೋಟುಗಳ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿಟ್ಟಿದ್ದ. ಆ ಹಣವನ್ನು ಚೆನೈನಲ್ಲಿರುವ, ತನಗೆ ಪರಿಚಯವಿರುವ ಎನ್‌ಆರ್‌ಐ ಮಣಿ ಸೇರಿದಂತೆ ಐದು ಮಂದಿಯನ್ನು ಸಂಪರ್ಕಿಸಿ ಹಣ ಬದಲಾಯಿಸಿಕೊಳ್ಳಲು ಮಾತುಕತೆ ನಡೆಸಲಾಗಿತ್ತು. ಆದರೆ ಹಲವು ಕಾರಣಗಳಿಂದ ಭಾರೀ ಮೊತ್ತದ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗಲೇ ಇಲ್ಲ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ತನಿಖಾಕಾರಿಯೊಬ್ಬರು ತಿಳಿಸಿದರು.
ಮತ್ತೂಂದೆಡೆ ಪೊಲೀಸ್ ವಿಚಾರಣೆಯಲ್ಲಿ ಆರೋಪಿ ನಾಗ ಹೈಡ್ರಾಮ ಸೃಷ್ಟಿಸುತ್ತಿ ದ್ದಾನೆ. “ಜಾಮೀನು ಸಿಗುತ್ತದೆ ಎಂಬ ಕಾರಣಕ್ಕೆ ಅಹಂಕಾರದಿಂದ ವರ್ತಿಸುತ್ತಿದ್ದೆೆ. ಜಾಮೀನು ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ಶರಣಾಗಲು ನಿರ್ಧರಿಸಿದ್ದೆ. ಆದರೆ ಭಯದಿಂದ ಅವಿತುಕೊಂಡಿದ್ದೆ. ನನಗೆ ಪೊಲೀಸರನ್ನು ಕಂಡರೆ ಭಯವಿದೆ, ಇದೊಂದು ಬಾರಿ ಕ್ಷಮಿಸಿಬಿಡಿ’ ಎಂದು ಗೋಳಾಟ ನಡೆಸುತ್ತಿದ್ದಾನೆ. ವಿಚಾರಣೆ ನಡೆಸುವ ಸಲುವಾಗಿ ಬಂದ ಎಸಿಪಿ ರವಿಕುಮಾರ್ ಅವರ ಕಾಲಿಗೆ ಬಿದ್ದ ನಾಗರಾಜ, ಐದು ನಿಮಿಷಕ್ಕೂ ಹೆಚ್ಚು ಕಾಲ “ಸಾರ್, ತಪ್ಪಾಯಿತು ಬಿಟ್ಟು ಬಿಡಿ’ ಎಂದು ಅವಲತ್ತುಕೊಂಡು ವಿಚಿತ್ರವಾಗಿ ಆಡುತ್ತಿದ್ದಾ ನೆ. ಕ್ಷಣಕ್ಕೊಂದು ಹೇಳಿಕೆ ನೀಡಿ ವಿಚಿತ್ರವಾಗಿ ವರ್ತಿಸುತ್ತಾನೆ ಎಂದು ಹಿರಿಯ ಅಕಾರಿ ತಿಳಿಸಿದರು.