Advertisement

UV Fusion: ಅತಿಯಾದ ಯಂತ್ರಗಳ ಬಳಕೆ ಸಲ್ಲದು

11:17 AM Oct 02, 2023 | Team Udayavani |

ಈ ಜಗತ್ತು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೂಲಾಗ್ರ ಬೆಳವಣಿಗೆಯನ್ನು ಕಂಡಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಇತ್ತೀಚಿನ ದಿನಗಳಲ್ಲಿ ಯಂತ್ರಗಳ ಬಳಕೆಯಿಲ್ಲದೆ ಬದುಕೇ ಅಸಾಧ್ಯ ಎನ್ನುವಂತಾಗಿದೆ. ಇಂದು ಜನ ಜೀವನ ಸಂಪೂರ್ಣವಾಗಿ ಯಂತ್ರಗಳನ್ನು ಅವಲಂಬಿತವಾಗಿದೆ. ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ, ಕೃಷಿಗೆ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯಂತ್ರಗಳು ಲಗ್ಗೆಯಿಟ್ಟಿವೆ.

Advertisement

ಸಂಶೋಧನೆಯ ಫ‌ಲವಾಗಿ ಕಂಡುಕೊಂಡ ಯಂತ್ರಗಳು ಉಪಯುಕ್ತವಾದರೂ ಅವುಗಳ ಅತಿಯಾದ ಅವಲಂಬನೆಯಿಂದ ಅನೇಕ ದುಷ್ಪರಿಣಾಮಗಳಿವೆ. ಯಂತ್ರಗಳ ಬಳಕೆಯಿಂದ ಕೆಲಸಗಳು ಬೇಗ ಆಗಿ ಸಮಯ ಉಳಿಸಬಹುದು, ಆದರೆ ಇದರಿಂದ ಅನೇಕ ಜನರು ವಿಶೇಷವಾಗಿ ಕಾರ್ಮಿಕ ವರ್ಗದ ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಿರುವುದು ಕಾಣಬಹುದು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿ ಯಾವತ್ತೂ ಒಳ್ಳೆಯದನ್ನು ಮಾಡಲಾರದು. ಯಂತ್ರಗಳ ಅತಿಯಾದ ಬಳಕೆ ನಮ್ಮ ಆರೋಗ್ಯ, ಪರಿಸರದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ.

ನೇಗಿಲ ಹಿಡಿದ ಹೊಳದೊಳು ಹಾಡುವ ಉಳುವ ಯೋಗಿಯ ನೋಡಲ್ಲಿ ಎಂಬುದು ಕುವೆಂಪು ಅವರ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು ಎಂದರು ತಪ್ಪಾಗಲಾರದು. ಇಂದು ನೇಗಿಲು ಹಿಡಿದು ಉಳುಮೆ ಮಾಡುವ ರೈತರನ್ನು ಒಂದಿಷ್ಟು ಮಟ್ಟಿಗೆ ನಾವು ಕಾಣುತ್ತೇವೆ. ಹಾಗೆಯೇ ಎಲ್ಲ ನೆರೆ ಹೊರೆ ಹೆಂಗಸರು ಮತ್ತು ಗಂಡಸರು ಎಲ್ಲರೂ ಒಟ್ಟಿಗೆ ಸೇರಿ ಜನಪದ ಹಾಡುಗಳನ್ನು ಕಟ್ಟುತ್ತ ಒಗಟು ಬಿಡಿಸುತ್ತಾ ನಾಟಿ ಮಾಡುವುದು ಅಥವಾ ಗದ್ದೆ ಕೊಯ್ಲು ಮಾಡುವುದು ಕೂಡ ಅಪರೂಪವಾಗಿದೆ. ಇನ್ನೂ ಕೈಗಾರಿಕೆಗಳಲ್ಲಿ 10 ಜನ ಮಾಡುತ್ತಿದ್ದ ಕೆಲಸ ಇಂದು 1 ಯಂತ್ರ ಮಾಡುತ್ತಿದೆ. ಆದ್ದರಿಂದ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಇನ್ನಿತರ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಯಾವುದೇ ವಸ್ತುವಿರಲಿ ಅದನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸುವುದು ಜಾಣತನ. ಇಲ್ಲದೇ ಹೋದಲ್ಲಿ ಮಾನವ ಯಂತ್ರ ತಂತ್ರಜ್ಞಾನಗಳ ಗುಲಾಮನಾಗಬೇಕಾದ ಪರಿಸ್ಥಿತಿ ಎದುರಾಗಬಹುದು. ಯಂತ್ರಗಳನ್ನು ಬಳಸೋಣ ಆದರೆ ಅತಿಯಾಗಿ ಬಳಸದಿರಲು ಎಚ್ಚರವಹಿಸೋಣ.

-ರಶ್ಮಿತಾ

ಎಂ.ಜಿ.ಎಂ. ಕಾಲೇಜು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next