Advertisement

ಮೈಷುಗರ್ ಉಳಿಸಿಕೊಳ್ಳಲು ಕಸರತ್ತು

06:45 AM May 17, 2020 | Lakshmi GovindaRaj |

ಬೆಂಗಳೂರು: ಮಂಡ್ಯದ ಮೈಸೂರು ಶುಗರ್‌ ಕಾರ್ಖಾನೆಯನ್ನು ಸರ್ಕಾರದಲ್ಲೇ ಉಳಸಿಕೊಂಡು ನಿರ್ವಹಣೆ ಕಾರ್ಯವನ್ನಷ್ಟೇ ಖಾಸಗಿಯವರಿಗೆ ನೀಡಲು ಕ್ರಮ ವಹಿಸಬೇಕು. ಈ ಸಂಬಂಧ ಪ್ರಸ್ತಾವವನ್ನು ಮುಂದಿನ ಸಚಿವ ಸಂಪುಟ  ಸಭೆಗೆ ಮಂಡಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಶನಿವಾರ ರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು  ಖಾಸಗಿ  ಯವರಿಗೆ ನೀಡಲು ಅವಕಾಶ ಕೊಡಬಾರದು. ಮಂಡ್ಯ ನನಗೆ ಜನ್ಮ ನೀಡಿದ ಜಿಲ್ಲೆಯಾಗಿದ್ದು, ಅದರೊಂದಿಗೆ ಭಾವನಾತ್ಮಕ ಸಂಬಂಧವಿದೆ. ನಾನು ಮುಖ್ಯಮಂತ್ರಿ ಯಾದ ಸಂದರ್ಭದಲ್ಲಿ ಮಂಡ್ಯದ ರೈತರಿಗೆ ಅನ್ಯಾಯವಾಗಲು  ಬಿಡುವುದಿಲ್ಲ. ಸಾಲ ಪಡೆದಾದರೂ ಕಾರ್ಖಾನೆ ಉಳಿಸಬೇಕೆಂದು ಸೂಚಿಸಿದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.