Advertisement

ವಿದ್ಯಾರ್ಥಿಗಳಿಗೆ ಓದು, ಪರೀಕ್ಷೆಯ ಚಿಂತೆ!

01:46 PM Sep 09, 2022 | Team Udayavani |

ಆಟ, ಪಾಠದಲ್ಲಿ ಸಂತಸ ಪಡಬೇಕಾಗಿರುವ ಮಕ್ಕಳಿಗೆ ಈಗ ಓದು ದೊಡ್ಡ ಸಮಸ್ಯೆಯಾಗಿದೆಯಂತೆ! ಓದು, ಪರೀಕ್ಷೆ, ಫ‌ಲಿತಾಂಶದಿಂದಲೇ ದೇಶದ ಶೇ.81 ವಿದ್ಯಾರ್ಥಿಗಳು ಚಿಂತೆಯಲ್ಲಿದ್ದಾರೆ. ಕೇಂದ್ರ ಸರಕಾರ ನಡೆಸಿದ ಸಮೀಕ್ಷೆಯಿಂದ ಈ ಅಂಶ ಹೊರಬಿದ್ದಿದೆ.

Advertisement

ಸಮೀಕ್ಷೆ ನಡೆಸಿದ್ದು ಯಾರು? :

ಕೇಂದ್ರ ಶಿಕ್ಷಣ ಇಲಾಖೆಯ “ಮನೋ ದರ್ಪಣ ಸೆಲ್‌’ನಿಂದ ದೇಶಾದ್ಯಂತ 6-12ನೇ ತರಗತಿಯ 3.78 ಲಕ್ಷ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಗಿದೆ.

ಚಿಂತೆಯ ಮೂಲ :

ಸಮೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಗಳಲ್ಲಿ ಶೇ.50 ವಿದ್ಯಾರ್ಥಿಗಳಿಗೆ ಓದು ವುದು ಚಿಂತೆ, ಶೇ.31 ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ಫ‌ಲಿತಾಂಶದ ಚಿಂತೆ. 6-8ನೇ ತರಗತಿ ವಿದ್ಯಾರ್ಥಿಗಳಿಗಿಂತ 9-12ನೇ ತರಗತಿ ವಿದ್ಯಾರ್ಥಿಗಳಲ್ಲಿ ಈ ಚಿಂತೆ ಹೆಚ್ಚಿದೆ. ಇವರಲ್ಲಿ ಶೇ.51 ಮಂದಿಗೆ ಆನ್‌ಲೈನ್‌ ಶಿಕ್ಷಣ ಕಷ್ಟವಾಗಿದೆ.

Advertisement

ಜೀವನದ ಬಗ್ಗೆ ಆಸಕ್ತಿ :

ಶೇ.51 ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಜೀವನ ಇಷ್ಟವಾಗಿದ್ದರೆ, ಶೇ.73 ಮಕ್ಕಳಿಗೆ ಶಾಲೆ ಜೀವನ ಇಷ್ಟವಂತೆ.

ಶೇ.28.4 ವಿದ್ಯಾರ್ಥಿಗಳು ಪ್ರಶ್ನೆ ಕೇಳುವುದೆಂದರೆ ಭಯ ಎಂದಿದ್ದಾರೆ. ಶೇ.23 ವಿದ್ಯಾರ್ಥಿಗಳಿಗೆ ಮಾತನ್ನು ಹೇಗೆ ಆರಂಭಿಸಬೇಕು ಎನ್ನುವುದು ದೊಡ್ಡ ಸಮಸ್ಯೆ ಎನ್ನುವುದು ಗೊತ್ತಾಗಿದೆ.

3.78 ಲಕ್ಷ – ವಿದ್ಯಾರ್ಥಿಗಳ ಸಮೀಕ್ಷೆ

6-12ನೇ ತರಗತಿ- ಸಮೀಕ್ಷೆಗೆ ಒಳಗಾದವರು

50% ಓದುವುದೇ ಚಿಂತೆ ಎನ್ನುವ ವಿದ್ಯಾರ್ಥಿಗಳು

31% ಪರೀಕ್ಷೆ, ಫ‌ಲಿತಾಂಶಕ್ಕೆ ತಲೆ ಕೆಡಿಸಿಕೊಂಡ ವಿದ್ಯಾರ್ಥಿಗಳು

29% ಏಕಾಗ್ರತೆ ಬರುವುದೇ

ಇಲ್ಲ ಎಂದವರು

51% ವೈಯಕ್ತಿಕ ಜೀವನದ

ಬಗ್ಗೆ ಖುಷಿ ಇರುವವರು

ಕೊರೊನಾ ಪರಿಣಾಮ :

ಶೇ.43 ಮಕ್ಕಳಿಗೆ ಕೊರೊನಾ ಕಾಲದಲ್ಲಿ ಮನಃಸ್ಥಿತಿ ಯಲ್ಲಿ ಏರುಪೇರು ಉಂಟಾಗಿದೆ. ಶೇ.14 ಮಂದಿ ಮಾನಸಿಕ ನೋವಿಗೀಡಾಗಿದ್ದಾರೆ. ಶೇ.18 ಮಂದಿಯ ಮನೆಯಲ್ಲಿ ಆರ್ಥಿಕ ಸಮಸ್ಯೆ ಆಗಿದೆ.

ಗಣಿತವೇ ಕಷ್ಟ: ದೇಶದಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಗಣಿತ, ಭಾಷಾ ವಿಷಯ ಜ್ಞಾನದ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದೆ. ಅದರ ಪ್ರಕಾರ 3ನೇ ತರಗತಿಯ ಶೇ.11 ವಿದ್ಯಾರ್ಥಿಗಳಿಗೆ ಗಣಿತದ ಮೂಲ ಜ್ಞಾನವೂ ಇಲ್ಲ. ಶೇ.37 ಮಕ್ಕಳಿಗೆ ತಕ್ಕಮಟ್ಟಿನ ಗಣಿತ ಜ್ಞಾನವಿದೆ. ಶೇ.48 ಮಕ್ಕಳಿಗೆ ಅಗತ್ಯದಷ್ಟು ಮಾತ್ರ ಗಣಿತ ಜ್ಞಾನವಿದ್ದರೆ, ಶೇ.10 ವಿದ್ಯಾರ್ಥಿಗಳಲ್ಲಿ ಜ್ಞಾನ ಉನ್ನತ ಮಟ್ಟದಲ್ಲಿದೆ. 86,000 ಮಕ್ಕಳಿಗೆ ಈ ಸಮೀಕ್ಷೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next