Advertisement

ಭ್ರಷ್ಟಾಚಾರ ವಿಚಾರಣೆ: ಕೋರ್ಟಿಗೆ ಹಾಜರಾದ ಜೇಕಬ್‌ ಝೂಮಾ

03:36 PM Apr 06, 2018 | Team Udayavani |

ಡರ್ಬಾನ್‌ : ಬಹ್ಮಾಂಡ ಭ್ರಷ್ಟಾಚಾರದ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ಜೇಕಬ್‌ ಝೂಮಾ ಅವರು ದೀರ್ಘ‌ ಕಾಲದಿಂದ ಎದುರಿಸುತ್ತಿರುವ ಭ್ರಷ್ಟಾಚಾರ ವಿಚಾರಣೆಯ ಪ್ರಯುಕ್ತ ಇಂದು ಕಿಕ್ಕಿರಿದು ತುಂಬಿದ ಡರ್ಬಾನ್‌ ನ್ಯಾಯಾಲಯದಲ್ಲಿ  ಹಾಜರಾಗಿ ಕಟಕಟೆಯಲ್ಲಿ ಸಾವಕಾಶವಾಗಿ ನಿಂತು ಏನೂ ಆಗಿಲ್ಲವೆಂಬಂತೆ ವರ್ತಿಸಿದರು. 

Advertisement

75ರ ಹರೆಯದ ಝೂಮಾ ವಿರುದ್ಧದ ವಿಚಾರಣೆಯ ಮುಂದಿನ ದಿನಾಂಕವನ್ನು ನ್ಯಾಯಾಲಯ ಜೂನ್‌ 8ಕ್ಕೆ ನಿಗದಿಸಿತು.

ಬಳಿಕ ಕೋರ್ಟಿನಿಂದ ಹೊರ ಬಂದ ಝೂಮಾ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ  ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಅವರ ಬೆಂಬಲಿಗರು ಆಳುವ ಆಫ್ರಿಕನ ನ್ಯಾಶನಲ್‌ ಕಾಂಗ್ರೆಸ್‌ ಪಕ್ಷದ ಧ್ವಜ ಮತ್ತಿತರ ಚಿಹ್ನೆಗಳನ್ನು ಪ್ರದರ್ಶಿಸಿದರು.

“ನನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಕೇವಲ ರಾಜಕೀಯ ಪ್ರೇರಿತವಾದವುಗಳು’ ಎಂದು ಝೂಮಾ ಆಪಾದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next