ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ತನಿಖೆಯ ಭಾಗವಾಗಿ ಸೋರೆನ್, ಐಎಎಸ್ ಅಧಿಕಾರಿ ಮತ್ತು ರಾಂಚಿಯ ಮಾಜಿ ಜಿಲ್ಲಾಧಿಕಾರಿ ಛವಿ ರಂಜನ್, ಭಾನು ಪ್ರತಾಪ್ ಪ್ರಸಾದ್ ಸೇರಿದಂತೆ 25 ಕ್ಕೂ ಹೆಚ್ಚು ಜನರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಭೂಕಬಳಿಕೆಯ ಆರೋಪವನ್ನು ಸೋರೆನ್ ನಿರಾಕರಿಸಿದ್ದರು ಬಿಜೆಪಿ ನನ್ನ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದೆ ಹಾಗಾಗಿ ನನ್ನ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲು ಮಾಡಿದೆ ಎಂದು ಹೇಳಿಕೊಂಡಿದ್ದರು.
ಜನವರಿ 31 ರಂದು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಸೊರೇನ್ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ರಾಂಚಿ ರಾಜಭವನದಿಂದ ಬಂಧಿಸಲಾಯಿತು. ಇದಾದ ಬಳಿಕ ಜೂನ್ 22 ರಂದು, ಭೂಕಬಳಿಕೆ ಸಂಬಂಧ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಭಾಗವಾಗಿ ರಾಂಚಿಯಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ 1 ಕೋಟಿ ರೂಪಾಯಿ ನಗದು ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಪತ್ತೆಯಾಗಿತ್ತು.
ಸದ್ಯ ಬಂಧನವಾದ 5 ತಿಂಗಳ ಬಳಿಕ ಸೊರೇನ್ ಗೆ ಜಾಮೀನು ಮಂಜೂರಾಗಿದೆ.
ಇದನ್ನೂ ಓದಿ: Egret: ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!