ಕಾಬೂಲ್: ತಾಲಿಬಾನ್ ಸಂಘಟನೆ ಅಫ್ಘಾನಿಸ್ಥಾನವನ್ನು ವಶಕ್ಕೆ ಪಡೆದ ಬಳಿಕ ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಈ ಹಿಂದೆ ಇದ್ದ ಅಮೆರಿಕ ಬೆಂಬಲಿತ ಅಫ್ಘಾನ್ ಸರ್ಕಾರದ ಬಳಿಕ ತಾಲಿಬಾನ್ ತನ್ನದೇ ಆಡಳಿತ ನಡೆಸಲು ಮುಂದಾಗಿದೆ.
ತಾಲಿಬಾನ್‌ನ ಸಹ ಸಂಸ್ಥಾಪಕ ಮತ್ತು ಉಪ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ.
ತಾಲಿಬಾನ್ ಹಣಕಾಸು ಸಚಿವ ಮತ್ತು ರಕ್ಷಣಾ ಮಂತ್ರಿ ಹುದ್ದೆಗಳಿಗೆ ನಿಷ್ಠಾವಂತ, ಹಿರಿಯ ಪರಿಣತರನ್ನು ನೇಮಿಸಿದೆ. ಗುಂಪಿನ ಇಬ್ಬರು ಸದಸ್ಯರು ಹೇಳುವಂತೆ, ಇದು ರಾಷ್ಟ್ರದ ಮಿಲಿಟರಿ ವಿಜಯದಿಂದ ಗಮನವನ್ನು ಬದಲಾಯಿಸುತ್ತದೆ. ಸಚಿವರ ಆಯ್ಕೆಗಳನ್ನು ಇನ್ನೂ ಅಧಿಕೃತಗೊಳಿಸಲಾಗಿಲ್ಲ ಎಂದು ತಾಲಿಬಾನ್ ಮುಖಂಡರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಕಾಬುಲ್ ಏರ್ ಪೋರ್ಟ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ : 12 ಅಮೆರಿಕ ಮಿಲಿಟರಿ ಸಿಬ್ಬಂದಿ ಸಾವು
ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಅಮೆರಿಕದ ಕಾರಾಗೃಹದಲ್ಲಿ ಬಂಧಿತನಾಗಿದ್ದ ಮುಲ್ಲಾ ಅಬ್ದುಲ್ ಕಯ್ಯುಮ್ ಜಾಕೀರ್ ನನ್ನು ತಾಲಿಬಾನ್ ಹೊಸ ರಕ್ಷಣಾ ಸಚಿವರನ್ನಾಗಿ ನೇಮಿಸಿದೆ ಎಂದು ಅಲ್ ಜಜೀರಾ ಸುದ್ದಿ ವಾಹಿನಿ ತಾಲಿಬಾನ್ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಅಂತಾರಾಷ್ಟ್ರೀಯ ನಿರ್ಬಂಧಗಳ ಪಟ್ಟಿಯಲ್ಲಿರುವ ಗುಲ್ ಅಘಾ ಅವರು ಹೊಸ ಹಣಕಾಸು ಮಂತ್ರಿಯಾಗಿದ್ದಾರೆ ಎಂದು ಅಫ್ಘಾನಿಸ್ತಾನದ ಪಜ್‌ವಾಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಯೋತ್ಪಾದಕ ಸಂಘಟನೆ ತಾಲಿಬಾನ್ ಎಲ್ಲಾ ಸರ್ಕಾರಿ ಕಚೇರಿಗಳು, ಅಧ್ಯಕ್ಷೀಯ ಅರಮನೆ ಮತ್ತು ಸಂಸತ್ತಿನ ಮೇಲೆ ಹಿಡಿತ ಸಾಧಿಸಿದ ಹದಿನೈದು ದಿನಗಳೊಳಗೆ ಪ್ರಮುಖ ನೇಮಕಾತಿಗಳು ನಡೆಯುತ್ತಿದೆ.