Theft: ಆಸ್ಪತ್ರೆಯಲ್ಲಿ 62 ಟ್ಯಾಬ್‌ಗಳನ್ನು ಕದ್ದಿದ್ದ ಮಾಜಿ ನೌಕರ ಬಂಧನಬೆಂಗಳೂರು: ಜಯನಗರ 2ನೇ ಹಂತದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಟ್ಯಾಬ್ ಕಳವು ಪ್ರಕರಣದಲ್ಲಿ ಮಾಜಿ ಗುತ್ತಿಗೆ ನೌಕರರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಹೊಸಕೆರೆಹಳ್ಳಿಯ ಶ್ರೀನಿವಾಸ್ (37) ಬಂಧಿತ. ಈತನಿಂದ 19 ಲಕ್ಷ ರೂ. ಮೌಲ್ಯದ 62 ಲೆನೋವಾ ಟ್ಯಾಬ್, ಎರಡು ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಯನಗರ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯ ಕರ್ತೆಯರಿಗೆ ವಿತರಿಸಲೆಂದು ಟ್ಯಾಬ್ ಮತ್ತು ಬ್ಯಾಟರಿ ಗಳನ್ನು ಸರ್ಕಾರ ಖರೀದಿ ಮಾಡಿತ್ತು. ತಾತ್ಕಾಲಿಕ ಗೋದಾಮು ರೂಪದಲ್ಲಿ ಜಯನಗರ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಿಟ್ಟುಕೊಂಡು ಹಂತ-ಹಂತವಾಗಿ ವಿತರಿಸುತ್ತಿದ್ದರು. 2019ರಲ್ಲಿ ಗುತ್ತಿಗೆ ಆಧಾರದ ಮೇಲೆ ಆ್ಯಂಬುಲೆನ್ಸ್ ಚಾಲಕನಾಗಿ ಸೇರಿದ್ದ ಶ್ರೀನಿವಾಸ್, 2 ವರ್ಷಗಳ ಕಾಲ ಕೆಲಸ ಮಾಡಿದ್ದ. 2022ರ ಏಪ್ರಿಲ್‌ನಲ್ಲಿ ಕೆಲಸ ಬಿಟ್ಟು ಸ್ವಂತ ಟೆಂಟೋ ಟ್ರಾವೆಲ್ಲರ್ ಇಟ್ಟು ಕೊಂಡು ಟ್ರಾವೆಲ್ಸ್‌ಗೆ ಬಿಟ್ಟಿದ್ದ. ಇದರ ಜತೆಗೆ ಜಯ ನಗರ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿ, ಸಿಬ್ಬಂದಿ ಪರಿ ಚಯವಿದ್ದ ಕಾರಣಕ್ಕೆ ಆಗಾಗ ಬಂದು ಹೋಗುತ್ತಿದ್ದ. ತುರ್ತಾಗಿ ಚಾಲಕ ಬೇಕಿದ್ದಾಗ ಇಲ್ಲಿನ ಅಧಿಕಾರಿಗಳು ಶ್ರೀನಿವಾಸ್‌ನನ್ನು ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಆರೋಗ್ಯ ಕೇಂದ್ರದಲ್ಲಿ ಟ್ಯಾಬ್ ಇದ್ದುದನ್ನು ಗಮನಿಸಿದ್ದ ಆರೋಪಿ, ಆಸ್ಪತ್ರೆಯ ಕೀಗಳನ್ನು ನಕಲಿ ಮಾಡಿಸಿಟ್ಟುಕೊಂಡಿದ್ದ. ಜುಲೈ 9ರ ರಾತ್ರಿ ಆಸ್ಪತ್ರೆಗೆ 61 ಟ್ಯಾಬ್ ಮತ್ತು ಎರಡು ಬ್ಯಾಟರಿ ಕಳವು ಮಾಡಿಕೊಂಡು ತನ್ನ ಮನೆಯಲ್ಲಿ ಸಂಗ್ರಹಿಸಿದ್ದ. ಮರುದಿನ ಆಸ್ಪತ್ರೆಗೆ ಬಂದ ವೈದ್ಯರು, ಟ್ಯಾಬ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇದ್ದುದನ್ನು ಕಂಡು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಮೋಹನ್ ಡಿ. ಪಟೇಲ್ ನೇತೃತ್ವದ ತಂಡ ಜು.13ರ ಜಯನಗರದ 2ನೇ ಹಂತದ ಖಾದಿ ಸ್ಟ್ರೀಟ್ ಹೋಟೆಲ್ ಮುಂಭಾಗದಲ್ಲಿ ಟ್ಯಾಬ್ ಇಟ್ಟುಕೊಂಡು ಮಾರಾಟಕ್ಕೆ ಶ್ರೀನಿವಾಸ್, ಗ್ರಾಹಕರಿಗಾಗಿ ಹುಡುಕು ತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ರೆಡ್‌ಹ್ಯಾಂಡ್ ಆಗಿ ಶ್ರೀನಿವಾಸ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.