ನವದೆಹಲಿ:ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ನಗರದ ಎರಡು ವಿಲ್ಲಾಗಳಲ್ಲಿ ಭಾನುವಾರ ಮುಂಜಾನೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೇರಿದಂತೆ 22 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಡ್ರಗ್ಸ್ ಮತ್ತು ಹುಕ್ಕಾಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಗಾಜಿಯಾಬಾದ್: ಮನೆಯೊಳಗೆ ನುಗ್ಗಿ ಗುಂಡಿನ ದಾಳಿ, ಮಕ್ಕಳು ಸೇರಿ ಮೂವರ ಹತ್ಯೆ
ಬಂಧಿತರದಲ್ಲಿ ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿ ಸೇರಿದಂತೆ 12 ಮಂದಿ ಮಹಿಳೆಯರು, ಇದರಲ್ಲಿ ನಾಲ್ಕು ಮಹಿಳೆಯರು ದಕ್ಷಿಣ ಭಾರತ ಸಿನಿಮಾರಂಗದ ಜತೆ ಸಂಪರ್ಕ ಹೊಂದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರೇವ್ ಪಾರ್ಟಿ ನಡೆಯುತ್ತಿದ್ದ ವಿಲ್ಲಾದ ಮೇಲೆ ದಾಳಿ ನಡೆಸಿರುವುದಾಗಿ ನಾಸಿಕ್ ರೂರಲ್ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ.
ನಾಸಿಕ್ ನ ಪ್ರತಿಷ್ಠಿತ ಸ್ಕೈ ತಾಜ್ ಮತ್ತು ಸ್ಕೈ ಲಾಗೂನ್ ವಿಲ್ಲಾದಲ್ಲಿ ಈ ರೇವ್ ಪಾರ್ಟಿ ನಡೆಯುತ್ತಿದ್ದು, 12 ಮಹಿಳೆಯರು ಹಾಗೂ ಹತ್ತು
ಮಂದಿ ಪುರುಷರನ್ನು ಬಂಧಿಸಲಾಗಿದೆ. ಇವರೆಲ್ಲರೂ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ
ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.