Advertisement
ಇಲ್ಲೊಂದು ಕಥೆಯಿದೆ.ಒಬ್ಬ ರಾಜನಿಗೆ ಒಬ್ಬನೇ ಪುತ್ರನಿದ್ದ. ಆತನೇ ಉತ್ತರಾಧಿಕಾರಿ. ತನ್ನ ಸ್ಥಾನ ಕ್ಕೇರುವ ಮುನ್ನ ಆತ ಬುದ್ಧಿವಂತ, ಜ್ಞಾನಿ ಮತ್ತು ವಿವೇಕಿ ಯಾಗಬೇಕು ಎಂದು ರಾಜ ಬಯಸಿದ್ದ. ಇದ ಕ್ಕಾಗಿ ಆತ ಆರಿಸಿಕೊಂಡ ಮಾರ್ಗ ಬಲು ವಿಚಿತ್ರವಾದುದಾಗಿತ್ತು.
ಒಂದು ದಿನ ಆತ ಯುವ ರಾಜನನ್ನು ಕರೆದು ತಾನು ಅವನನ್ನು ತ್ಯಜಿಸಿದ್ದಾಗಿ ಹೇಳಿದ. “ನನ್ನ ಮತ್ತು ನಿನ್ನ ನಡುವೆ ಈ ಕ್ಷಣದಿಂದ ಸಂಬಂಧ ಇಲ್ಲ’ ಎಂದು ಕಠಿನವಾಗಿ ನುಡಿದ.
Related Articles
Advertisement
ಎಷ್ಟೋ ವರ್ಷಗಳು ಕಳೆದ ಬಳಿಕ ಒಂದು ದಿನ ಆತ ಒಂದು ಉಪಾಹಾರ ಗೃಹದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತ ಕುಳಿತಿದ್ದ. ಬಿರು ಬೇಸಗೆಯ ಮಧ್ಯಾಹ್ನ ವದು. ಒಂದು ಜತೆ ಪಾದರಕ್ಷೆ ಕೊಳ್ಳಲು ಆತನ ಬಳಿ ಸಾಕಷ್ಟು ದುಡ್ಡಿರಲಿಲ್ಲ. ಹೀಗಾಗಿ ಪಾದರಕ್ಷೆ ಕೊಳ್ಳುವುದಕ್ಕಾಗಿ ಆತ ಹಣ ಬೇಡುತ್ತಿದ್ದ. ಅಷ್ಟ ರಲ್ಲಿ ಒಂದು ಚಿನ್ನದ ರಥ ಬಂದು ಅವನ ಮುಂದೆ ನಿಂತಿತು. ಅದರಿಂದ ಇಳಿದು ಬಂದ ರಾಜ ಭಟರು ಅರಸ ತನ್ನ ಕೊನೆಗಾಲದಲ್ಲಿ ಇದ್ದಾ ನೆಂದೂ, ನಿನ್ನನ್ನು ಸ್ಮರಿಸಿ ಕೊಳ್ಳುತ್ತಿದ್ದಾನೆ ಎಂದೂ ನೀನು ಉತ್ತರಾಧಿಕಾರಿಯಾಬೇಕಂತೆ ಎಂದೂ ಪ್ರಕಟಿಸಿದರು.
ಕ್ಷಣಾರ್ಧದಲ್ಲಿ ಎಲ್ಲವೂ ಬದಲಾ ಯಿತು. ಕಣ್ಣು ಮಿಟುಕಿಸುವಷ್ಟರಲ್ಲಿ ಭಿಕ್ಷುಕನ ಜಾಗದಲ್ಲಿ ಯುವರಾಜ ಅವ ತರಿಸಿದ್ದ. ಬಟ್ಟೆಗಳು ಭಿಕ್ಷುಕನದಾಗಿದ್ದವು, ಆದರೆ ಜನರ ಪರಿಗಣನೆ ಬದಲಾಗಿತ್ತು. ಸುತ್ತ ಸೇರಿದ ಜನರು ನೂತನ ಅರಸನ ಬಗ್ಗೆ ಅಭಿಮಾನದ ಮಾತುಗಳನ್ನಾ ಡುತ್ತಿದ್ದರು. ಕೆಲವು ತಾಸುಗಳ ಹಿಂದೆ ಚಿಲ್ಲರೆ ಕಾಸು ಅವನತ್ತ ಎಸೆಯುತ್ತಿದ್ದವರು ಈಗ ಅವನ ಬಗ್ಗೆ ಅಭಿಮಾನ, ಅವನ ಸ್ನೇಹಕ್ಕಾಗಿ ಕಾತರ ಪ್ರಕಟಿಸುತ್ತಿದ್ದರು.
ಯುವರಾಜ ರಥವನ್ನೇರಿ “ಅರ ಮನೆಗೆ ನಡೆಯಿರಿ’ ಎಂದ. ವೃದ್ಧ ರಾಜ ಪುತ್ರ ನನ್ನು ಎದುರುಗೊಂಡ. “ನನ್ನ ತಂದೆಯೂ ನನಗೆ ಅಧಿಕಾರ ನೀಡು ವುದಕ್ಕೆ ಮುನ್ನ ಹೀಗೆಯೇ ಮಾಡಿದ್ದರು. ನಿನ್ನನ್ನು ನಾನು ಅರಮನೆಯಿಂದ ಹೊರಗೆ ಕಳುಹಿಸುವಾಗ ನಿನಗೆ ನನ್ನ ಬಗ್ಗೆ ಸಿಟ್ಟು ಉಂಟಾಗಿದ್ದಿರಬಹುದು. ಆದರೆ ಅರಸೊತ್ತಿಗೆಯಲ್ಲಿ ಕುಳಿತು ಆಳುವಾತ ನಿಗೆ ಭಿಕ್ಷುಕನ ಜೀವನದ ಬಗ್ಗೆಯೂ ತಿಳಿದಿರಬೇಕು. ಆಗ ಮಾತ್ರ ಆತ ಪ್ರಜೆಗಳ ಬಗ್ಗೆ ಸಹಾನುಭೂತಿ ಇರುವ ರಾಜ ನಾಗಲು ಸಾಧ್ಯ. ಅಷ್ಟು ಮಾತ್ರ ಅಲ್ಲ. ಈ ಕ್ಷಣ ಇರುವ ಅರಸೊತ್ತಿಗೆ ಇನ್ನೊಂದು ಕ್ಷಣದಲ್ಲಿ ಮಾಯವಾಗಬಹುದು, ಅರಸ ಆಳಾಗಬಹುದು, ಭಿಕ್ಷುಕನಾಗಬಹುದು ಎಂಬ ಪರಮ ಸತ್ಯದ ಅರಿವೂ ಇರಬೇಕು’ ಎಂದು ವೃದ್ಧ ರಾಜ ನುಡಿದ.( ಸಾರ ಸಂಗ್ರಹ)