Advertisement

ಅವನನ್ನು ಎಲ್ಲರೂ ವಾಸೀಂ ಅಕ್ರಮ್ ಜೊತೆ ಹೋಲಿಕೆ ಮಾಡುತ್ತಿದ್ದರು: ರೈನಾ

01:57 PM Jun 06, 2020 | keerthan |

ಮುಂಬೈ: ಕೋವಿಡ್-19 ಲಾಕ್ ಡೌನ್ ಕಾರಣ ಸದ್ಯ ಕ್ರಿಕೆಟಿಗರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸುರೇಶ್ ರೈನಾ ಅವರು ಇರ್ಫಾನ್ ಪಠಾಣ್ ಬಗ್ಗೆ ಮಾತನಾಡಿದ್ದು, ಆರಂಭಿಕ ದಿನಗಳಲ್ಲಿ ಪಠಾಣ್ ರನ್ನು ಪಾಕಿಸ್ಥಾನದ ವಾಸಿಂ ಅಕ್ರಮ್ ಗೆ ಹೋಲಿಕೆ ಮಾಡಲಾಗುತ್ತಿತ್ತು ಎಂದಿದ್ದಾರೆ.

Advertisement

ಇರ್ಫಾನ್ ಪಠಾಣ್ ತನ್ನ 19 ನೇ ಪ್ರಾಯದಲ್ಲೇ ಟೀಂ ಇಂಡಿಯಾಕ್ಕೆ ಎಂಟ್ರಿ ನೀಡಿದವರು. 2002 ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಬಂದ ಇರ್ಫಾನ್ ಪಠಾಣ್, ತನ್ನ ಸ್ವಿಂಗ್ ಬೌಲಿಂಗ್ ನಿಂದ ಭಾರಿ ಪ್ರಸಿದ್ದಿ ಪಡೆದಿದ್ದರು. 2004ರಲ್ಲಿ ಪಾಕಿಸ್ಥಾನ ಸರಣಿಗೆ ಆಯ್ಕೆಯಾದ ಇರ್ಫಾನ್ ಪಠಾಣ್ ಮೊದಲ ಮುಲ್ತಾನ್ ಟೆಸ್ಟ್ ನಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದರು.

ಇರ್ಫಾನ್ ಪಠಾಣ್ ರ ಈ ಪ್ರದರ್ಶನಗಳು ಮುಂದೆ ಅವರನ್ನು ಟೀಂ ಇಂಡಿಯಾ ಪೋಸ್ಟರ್ ಬಾಯ್ ಇಮೇಜ್ ತಂದಿಟ್ಟಿತ್ತು. ಈ ಸಮಯದಲ್ಲೇ ಪಠಾಣ್ ರನ್ನು ಪಾಕಿಸ್ಥಾನದ ಸ್ವಿಂಗ್ ಸ್ಪೆಷಲಿಸ್ಟ್ ವಾಸೀಂ ಅಕ್ರಮ್ ಜೊತೆ ಹೋಲಿಕೆ ಮಾಡಲಾಗುತ್ತಿತ್ತು.

ಈ ಬಗ್ಗೆ ನೆನಪಿಸಿಕೊಂಡ ಸುರೇಶ್ ರೈನಾ, ನಾನು ಟೀಂ ಇಂಡಿಯಾಗೆ ಬಂದಿದ್ದು 2005ರಲ್ಲಿ. ಆಗ ನೀವು ಪ್ರಸಿದ್ದಿಯಲ್ಲಿದ್ದಿರಿ. ಉದ್ದವಾದ, ಗುಂಗುರು ಕೂದಲಿನಿಂದ ನೀವು ಹೆಡ್ ಆಂಡ್ ಶೋಲ್ಡರ್ ನ ರಾಯಭಾರಿಯಂತೆ ಕಾಣುತ್ತಿದ್ದೀರಿ ಎಂದು ರೈನಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next