Advertisement

ಪ್ರತಿಯೊಬ್ಬರೂ ಶರಣ ಸಂಸ್ಕೃತಿ ಮೈಗೂಡಿಸಿಕೊಳ್ಳಿ: ಸ್ವಾಮೀಜಿ

02:34 PM Jun 27, 2020 | Suhan S |

ಬನಹಟ್ಟಿ: ಶುದ್ಧವಾದ ಮಿತ ಆಹಾರ ಸೇವನೆ ಸೇರಿದಂತೆ ಮನುಷ್ಯನಿಗೆ ಆರೋಗ್ಯಪೂರ್ಣ ವಿಚಾರಗಳನ್ನು 12ನೇ ಶತಮಾನದಲ್ಲಿಯೇ ಬಸವಾದಿ ಪ್ರಮಥರು ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕೊರೊನಾದಿಂದ ದೂರವಿರಲು ಶರಣ ಸಂಸ್ಕೃತಿ ಮೈಗೂಡಿಸಿಕೊಳ್ಳುವುದು ಅವಶ್ಯವಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ ರಬಕವಿ-ಬನಹಟ್ಟಿ ತಾಲೂಕಾ ಗೌರವಾಧ್ಯಕ್ಷ, ಚಿಮ್ಮಡ ವಿರಕ್ತಮಠದ ಪೀಠಾಧ್ಯಕ್ಷ ಶ್ರೀ ಪ್ರಭು ಸ್ವಾಮೀಜಿ ಹೇಳಿದರು.

Advertisement

ಚಿಮ್ಮಡ ಗ್ರಾಮದ ವಿರಕ್ತಮಠದಲ್ಲಿ ಬಡಕಲಾವಿದರಿಗೆ ಆಹಾರ ಧಾನ್ಯ ಕಿಟ್‌ ವಿತರಿಸಿ ಮಾತನಾಡಿದ ಅವರು, ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.

ಮುಧೋಳ ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಜಾನಪದ ಕಲಾವಿದರ ಪಾತ್ರವೂ ಇದೆ. ಆತ್ಮ ತೃಪ್ತಿಗಾಗಿ ಕಲೆ ಪ್ರದರ್ಶಿಸಿ, ಕಲೆಯನ್ನು ಜೀವಂತವಾಗಿಟ್ಟಿರುವ ಕಲಾವಿದರು ನಮ್ಮ ದೇಶದ ಆಸ್ತಿ. ಹೆಮ್ಮಾರಿ ಕೋವಿಡ್ ಪ್ರಭಾವದಿಂದ ಕಲಾವಿದರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಕರ್ನಾಟಕ ಜಾನಪದ ಪರಿಷತ್ತು ನೆರವು ಒದಗಿಸುವ ಮೂಲಕ ಆಸರೆಯಾಗಿದ್ದು ಶ್ಲಾಘನೀಯ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಶಂಕರ ರಾವಳ, ಪ್ರಕಾಶ ಹನಗಂಡಿ, ಅನೀಲ ಹಾಸಿಲಕರ, ಶಾಂತಯ್ಯ ಮಠದ, ಪುಂಡಲೀಕ ಗುರವ, ಬರಮು ಕೋಳಿ ಇನ್ನಿತರರಿಗೆ ಆಹಾರಧಾನ್ಯದ ಕಿಟ್‌ ವಿತರಿಸಲಾಯಿತು. ಮುಧೋಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಮೇಶ ನೀಲಗುಂದ, ಬಯಲಾಟ ಅಕಾಡೆಮಿ ಮಾಜಿ ಸದಸ್ಯೆ ಸುಂದ್ರವ್ವ ಮೇತ್ರಿ, ಜಿಲ್ಲಾ ಕಜಾಪ ಸದಸ್ಯ ಶ್ರೀಶೈಲ ಪಟ್ಟಣಶೆಟ್ಟಿ ಇದ್ದರು. ಮಹಾಲಿಂಗಪುರ ವಲಯಾಧ್ಯಕ್ಷ ಬಸವರಾಜ ಮೇಟಿ ಸ್ವಾಗತಿಸಿದರು. ತೇರದಾಳ ವಲಯಾಧ್ಯಕ್ಷ ಗಂಗಾಧರ ಮೋಪಗಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next