ಯಾದಗಿರಿ: ಸಚಿವರಾಗಬೇಕು ಎನ್ನುವ ಆಸೆ ಆಪೇಕ್ಷೆ ಎಲ್ಲರಿಗೂ ಇರುತ್ತದೆ. ನಮಗೂ ಬಿಟ್ಟಿಲ ನಿಮಗೂ ಬಿಟ್ಟಿಲ್ಲ. ಎಲ್ಲರಿಗೂ ಮಂತ್ರಿಯಾಗಬೇಕು ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಇರುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎಚ್. ವಿಶ್ವನಾಥ್ ಉದ್ದೇಶಿಸಿ ಹೇಳಿದರು.
ಜಿಲ್ಲೆಯ ಶಹಾಪುರದಲ್ಲಿ ಮಾತನಾಡಿ, ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ವಿಚಾರ ಆತುರದ ನಿರ್ಧಾರ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ವಿಶ್ವನಾಥ್ ಅವರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಅವರ ಪರವಾಗಿ ನಮ್ಮ ಪಕ್ಷ ಗಟ್ಟಿಯಾಗಿ ನಿಲ್ಲುತ್ತದೆ. ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ. ಅವರು ಯಾವುದೆ ಕಾರಣಕ್ಕೂ ವಿಚಲಿತರಾಗಬಾರದು. ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ತಂದೇ ತರುತ್ತೇವೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಆರ್ಥಿಕವಾಗಿ ಸಾಮಾಜಿಕವಾಗಿ ಸಹಾಯ ಮಾಡಲು ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಅದು ಭಾಷೆ ಮೇಲೆ ಮಾಡಿರುವಂತ ಪ್ರಾಧಿಕಾರವಲ್ಲ. ತಪ್ಪಾಗಿ ಅರ್ಥೈಸಿಕೊಂಡು ಬಂದ್ ಮಾಡುವುದು ಬೇಡ ಎಂದು ಕನ್ನಡ ಪರ ಸಂಘಟನೆಗಳಿಗೆ ಡಿಸಿಎಂ ಸವದಿ ಮನವಿ ಮಾಡಿದರು.
ವರ್ತೂರ ಪ್ರಕಾಶ್ ಅಪಹರಣ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮಕೈಗೊಳ್ಳಬೇಕು ಆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಚಿವರನ್ನಾಗಿಸುವ ವಿಚಾರ ಮುಖ್ಯಮಂತ್ರಿಗಳಿಗೆ ಗೊತ್ತು ಎಂದು ಜಾರಿಕೊಂಡರು