Advertisement

ಲಾಕ್‌ಡೌನ್‌ ಯಶಸ್ಸಿಗೆ ಶ್ರಮಿಸೋಣ : ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸೋಣ

01:03 AM May 09, 2021 | Team Udayavani |

ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್‌. ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕೆ ನೂರಾರು ಉಪಾಯಗಳಿವೆ. ಅವುಗಳನ್ನು ಪ್ರಯತ್ನಿಸೋಣ.

Advertisement

ನಾವು ಏನು ಮಾಡಬಹುದು?
1. ಪ್ರತೀ ಗ್ರಾಮದ‌ಲ್ಲೂ ಯುವ ಸಂಘಟನೆ ಗಳಿವೆ, ಸಮುದಾಯ ಸಂಘಟನೆಗಳಿವೆ. ಅವುಗಳು ತಮ್ಮ ಸದಸ್ಯರ ಹಾಗೂ ಊರಿನ ಕುಟುಂಬಗಳ ಗುಂಪುಗಳನ್ನು ರಚಿಸಿ, ಅಗತ್ಯ ಸಾಮಗ್ರಿಗಳನ್ನು ಮನೆಗೇ ಪೂರೈಸಬಹುದು.

2. ಇಬ್ಬರು ಸದಸ್ಯರ ಒಂದು ತಂಡಕ್ಕೆ ನಿಗದಿತ ಸಂಖ್ಯೆಯ ಮನೆಗಳನ್ನು ನೀಡಿ, ವಾಟ್ಸಪ್‌ ಗುಂಪು ರಚಿಸಿ, ಸಾಮಗ್ರಿ ಬೇಕಾದವರ ಮಾಹಿತಿ ಪಡೆದು ಮನೆ ಬಾಗಿಲಿಗೇ ಒದಗಿಸಬಹುದು.

3. ಸಾಮಾನ್ಯವಾಗಿ ಬೇಕಾಗುವ ದಿನ‌ಸಿ ಸಾಮಗ್ರಿ ಹಾಗೂ ಔಷಧಗಳಿಗೆ ಪ್ರತ್ಯೇಕ ಸದಸ್ಯರನ್ನು ನಿಯೋಜಿಸಿದರೆ ಒಳ್ಳೆಯದು.

4. ವಸತಿ ಸಮುತ್ಛಯಗಳ ಸೊಸೈಟಿಗಳು, ಸಂಘಗಳೂ ಇದನ್ನು ಕೈಗೊಂಡರೆ, ಎಲ್ಲ ರನ್ನೂ ಸೋಂಕಿನಿಂದ ರಕ್ಷಿಸಬಹುದು.

Advertisement

5. ಒಂದುವೇಳೆ ಕೆಲವು ಮನೆಗಳಿಗೆ ಈ ವ್ಯವಸ್ಥೆ ಸೀಮಿತಗೊಳಿಸಿಕೊಂಡರೂ ನೆರೆಹೊರೆಯವರು ವಾಟ್ಸಪ್‌ ಗುಂಪು ರಚಿಸಿ, ಎಲ್ಲರ ಪರವಾಗಿ ಒಬ್ಬಿಬ್ಬರೇ ಮಾರುಕಟ್ಟೆ ಹೋಗಿ ಸಾಮಾನುಗಳನ್ನು ತರುವುದೂ ಒಳ್ಳೆಯದೇ.

6. ಒಂದು ವಾರ, 15 ದಿನ, ತಿಂಗಳಿಗೆ ಬೇಕಾಗುವ ವಸ್ತುಗಳನ್ನು ಒಮ್ಮೆಲೆ ಖರೀದಿಸುವುದು ಸೂಕ್ತ. ಕಷ್ಟ ಎನಿಸುವವರು ಪ್ರತೀ ದಿನವೂ ಹೋಗದೆ ಮೂರು ದಿನಕ್ಕೊಮ್ಮೆ ಹೋಗುವುದು ಅಥವಾ ಇದಕ್ಕಾಗಿ ಅಕ್ಕಪಕ್ಕದವರ ಸಹಾಯ ಪಡೆಯುವುದು ಸೂಕ್ತ.

ವರ್ತಕರು, ವ್ಯಾಪಾರ ಮಳಿಗೆ ಗಳು ಏನು ಮಾಡಬಹುದು?
1. ವಾಟ್ಸಪ್‌, ಫೋನ್‌ ಮೂಲಕ ವಸ್ತುಗಳ ಪಟ್ಟಿ ಪಡೆದು ಮನೆಗೇ ಪೂರೈಸಬಹುದು.
2.ವಸ್ತುಗಳ ಪಟ್ಟಿಯನ್ನು ಮೊದಲೇ ಪಡೆದು ಕಟ್ಟಿಟ್ಟರೆ, ಗ್ರಾಹಕರು ಅಂಗಡಿ ಎದುರು ಕಾಯುವುದು ತಪ್ಪಲಿದೆ. ಇದರಿಂದ ಸೋಂಕಿಗೆ ಒಡ್ಡಿಕೊಳ್ಳುವ ಸಂದರ್ಭ ಕ್ಷೀಣಿಸಲಿದೆ.
3.ಗ್ರಾಹಕರು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿ. “ಮಾಸ್ಕ್ ಧರಿಸಿದವರೊಂದಿಗೆ ಮಾತ್ರ ವ್ಯವಹಾರ’ ಎಂದು ಹೇಳಿ. ನಿಯಮ ಪಾಲಿಸಿದರೆ ನೀವೂ ಕ್ಷೇಮ, ನಾವೂ ಕ್ಷೇಮ ಎಂಬುದನ್ನು ಖಚಿತಪಡಿಸಿ.

ಜನಪ್ರತಿನಿಧಿಗಳು ಏನು ಮಾಡಬೇಕು?
1.ತಮ್ಮ ವಿಧಾನಸಭಾ ಕ್ಷೇತ್ರ, ಪಂಚಾಯತ್‌ ಕ್ಷೇತ್ರವಾರು ಪೇಟೆ, ಮಾರುಕಟ್ಟೆಗಳಲ್ಲಿ ಜನರು, ಸಾಮಾಜಿಕ ಅಂತರ ನಿಯಮ ಪಾಲಿಸು ವಂತೆ ಕಟ್ಟುನಿಟ್ಟಾಗಿ ಎಚ್ಚರವಹಿಸಬೇಕು.
2. ತಮ್ಮ ಕಾರ್ಯಕರ್ತರ ತಂಡ ರಚಿಸಿ ನಿಗಾ ವಹಿಸುವುದಲ್ಲದೇ, ತಾವೂ ಆಗಾಗ್ಗೆ ಭೇಟಿ ನೀಡಿ ಹಾಗೂ ಸಹಾಯವಾಣಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರಬೇಕು.
3. ಜನಪ್ರತಿನಿಧಿಗಳೇ ತಮ್ಮ ಕಾರ್ಯಕರ್ತರ ತಂಡಗಳ ಮೂಲಕ, ಸಂಘಟನೆಗಳ ಸದಸ್ಯರ ಮೂಲಕ ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ಮುಟ್ಟಿಸಿ.

ಪಾಲಿಕೆ, ಪಂಚಾಯತ್‌ಗಳು, ಜಿಲ್ಲಾಡಳಿತ ಏನು ಮಾಡಬೇಕು?
1. ಪಾಲಿಕೆ ಮತ್ತು ಪಂಚಾಯತ್‌ಗಳು ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಗುಂಪುಗಳನ್ನು ರಚಿಸಿ, ಸ್ಥಳೀಯರ ದೈನಂದಿನ ಅಗತ್ಯಗಳನ್ನು ಪೂರೈಸಬೇಕು. ಮಂಗಳೂರು ಮಹಾನಗರಪಾಲಿಕೆ ಹಿಂದಿನ ಬಾರಿ ವಾರ್ಡ್‌ ಮಟ್ಟದಲ್ಲಿ ಹೋಮ್‌ ಡೆಲಿವರಿಗೆ ಪ್ರಯತ್ನಿಸಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅಗತ್ಯವಿದೆ.
2. ಅನಗತ್ಯವಾಗಿ ಪೇಟೆಯಲ್ಲಿ ಓಡಾಡು ವರನ್ನು ಪತ್ತೆ ಹಚ್ಚಿ ಮನವೊಲಿಸಿ ವಾಪಸು ಕಳುಹಿಸಬೇಕು. ಅದಕ್ಕಾಗಿ ಗ್ರಾಮೀಣ ಕಾರ್ಯಪಡೆಯ ಸದಸ್ಯರು, ಸಂಘಟನೆಗಳ ಸದಸ್ಯರು ಕ್ರಿಯಾಶೀಲವಾಗಬೇಕು.
3. ಪೇಟೆಯ ಬಾಗಿಲಲ್ಲೇ ತಡೆಗಳನ್ನು ಹಾಕಿ, ವಾಹನಗಳನ್ನು ನಿರ್ಬಂಧಿಸಿ, ಸರಕು ಪೂರೈಕೆ ವಾಹನಗಳಿಗಷ್ಟೇ ಅನುಮತಿ ಇರಬೇಕು. ಜತೆಗೆ ಮಾರುಕಟ್ಟೆ ಪ್ರವೇಶಿಸುವಲ್ಲೇ ಸ್ಯಾನಿ ಟೈಸರ್‌ ಬಳಕೆ ಕಡ್ಡಾಯಗೊಳಿಸಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶ ನಿಷೇಧಿಸಬೇಕು.
4. ನಗರದ ಪ್ರತೀ ವಾರ್ಡ್‌ನಲ್ಲಿ ಮೀನು -ಮಾಂಸ, ತರಕಾರಿ, ದಿನಸಿ ಸಹಿತ ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗಳಿಗೆ ತಲುಪಿಸ ಬಲ್ಲ ಸಾಮಾನ್ಯ ಹಾಗೂ ಸಣ್ಣ ಗಾತ್ರದ ಅಂಗಡಿ ಗಳ ಪಟ್ಟಿಯನ್ನು ಸ್ಥಳೀಯಾಡಳಿತದವರು ಜನರಿಗೆ ನೀಡಬೇಕು. ಅದರಿಂದ ಜನರು ತಮಗೆ ಬೇಕಾ ದವರಲ್ಲೇ ಸಾಮಗ್ರಿ ಪಡೆಯಬಹುದು. ಹೆಚ್ಚು ದರ ವಸೂಲಿಯಾಗದಂತೆ ಪಾಲಿಕೆ ಮತ್ತು ಪಂ.ಗಳು ಉಸ್ತುವಾರಿ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next