Advertisement
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಉಸ್ತುವಾರಿಗಳ ಹೆಸರನ್ನು ಪ್ರಕಟಿಸಲಾಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಿ.ಎಸ್.ದ್ವಾರಕನಾಥ್ ಹೆಸರು ಅಂತಿಮಗೊಳಿಸಲಾಗಿದೆ. ಚಾಮರಾಜನಗರ ಮೀಸಲು ಕ್ಷೇತ್ರದ ಅಭ್ಯರ್ಥಿ ಹೆಸರು ಮಾ.15ರ ಸಮಾವೇಶದಲ್ಲಿ ಪ್ರಕಟಗೊಳ್ಳಲಿದೆ ಎಂದರು.
Related Articles
Advertisement
ಅತಂತ್ರ ಸ್ಥಿತಿ: ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಉತ್ತರ ಪ್ರದೇಶವೊಂದರಲ್ಲಿಯೇ 31 ಬಿಎಸ್ಪಿ ಸಂಸದರು ಗೆಲ್ಲುವುದರಿಂದ ಈ ಬಾರಿ ಪಕ್ಷದ ವರಿಷ್ಠೆ ಮಾಯಾವತಿ ಪ್ರಧಾನ ಆಗುವುದು ಬಹುತೇಕ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾದೇಶ್ ಉಪ್ಪಾರ್ ಮಾತನಾಡಿ, ಲೋಕಸಭಾ ಚುನಾವಣೆಯನ್ನು ಕಾರ್ಯಕರ್ತರು ಹಾಗೂ ಮುಖಂಡರು ಸವಾಲಾಗಿ ಸ್ವೀಕರಿಸಿ ನರಸೀಪುರ ಹಾಗೂ ವರುಣಾ ವಿಧಾನಸಭಾ ಎರಡೂ ಕ್ಷೇತ್ರಗಳಿಂದ 1 ಲಕ್ಷ ಮತವನ್ನು ಪಕ್ಷಕ್ಕೆ ಕೊಡಿಸಬೇಕು. ಕಾಂಗ್ರೆಸ್ ಹಾಗೂ ಬಿಜೆಪಿ ನಾಟಕಗಳನ್ನು ಜನರಿಗೆ ತಿಳಿಸುವ ಮೂಲಕ ಮತದಾರರನ್ನು ಜಾಗೃತಿಗೊಳಿಸಿ ಚಾಮರಾಜನಗರ ಕ್ಷೇತ್ರದಲ್ಲಿ ಬಿಎಸ್ಪಿ ಸಂಸದರು ಆಯ್ಕೆಗೊಳ್ಳಲು ಶ್ರಮಿಸಬೇಕು ಎಂದು ಕೋರಿದರು.
ಕ್ಷೇತ್ರಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಮಾತನಾಡಿದರು. ಸಭೆಯಲ್ಲಿ ಬಿಎಸ್ಪಿ ವಿಭಾಗದ ಉಸ್ತುವಾರಿ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸಾಮಿು, ವರುಣಾ ಬ್ಲಾಕ್ ಅಧ್ಯಕ್ಷ ಸುರೇಶ್, ತಾಪಂ ಮಾಜಿ ಸದಸ್ಯ ಕುಕ್ಕೂರು ಪುಟ್ಟಣ್ಣ, ಕ್ಷೇತ್ರ ಉಸ್ತುವಾರಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಮುಖಂಡರಾದ ಸೀನಪ್ಪ, ಸೋಮೇಶ, ಮನ್ನೇಹುಂಡಿ ನಾಗರಾಜು, ಕೈಯಂಬಳ್ಳಿ ಪುಟ್ಟಸ್ವಾಮಿ ಸೇರಿದಂತೆ ಹೋಬಳಿವಾರು ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರತಿ ಬೂತ್‌ನಲ್ಲೂ 300 ಮತ ಪಡೆಯಿರಿ: ಬೂತ್‌ವಾರು ಜನರೊಂದಿಗೆ ಬೆರೆತು ಮತದಾರರನ್ನು ಜಾಗೃತಗೊಳಿಸುವ ಕೆಲಸವನ್ನು ಈಗಿನಿಂದ ಕಾರ್ಯಕರ್ತರು ಮಾಡಬೇಕು. ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಆನೆ ಚಿಹ್ನೆಯನ್ನು ಉಳಿಸಿಕೊಳ್ಳಲು ಹಾಗೂ ಬಿಎಸ್ಪಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಉಳಿಸಿಕೊಳ್ಳಬೇಕಾದರೆ 8 ಲಕ್ಷ ಮತಗಳನ್ನು ಗಳಿಸಲೇಬೇಕು ಎಂದು ಶಾಸಕ ಎನ್. ಮಹೇಶ್ ಎಚ್ಚರಿಸಿದರು.
ರಾಜ್ಯದಿಂದ ಕನಿಷ್ಠ ಇಬ್ಬರು ಸಂಸದರನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಕಾರ್ಯಕರ್ತರ ಮೇಲಿದ್ದು, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳೆರಡನ್ನೂ ಈ ಬಾರಿ ಗೆಲ್ಲಲೇಬೇಕು. ಪ್ರತಿಯೊಂದು ಬೂತ್‌ನಲ್ಲಿ 300 ಮತಗಳು ಪಡೆಯಬೇಕು ಎಂದು ಮನವಿ ಮಾಡಿದರು.