ಫ್ರಾಂಕ್‌ಫರ್ಟ್: ಐರೋಪ್ಯ ಒಕ್ಕೂಟದ 19 ದೇಶಗಳಲ್ಲಿ ಹಣದುಬ್ಬರ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿದೆ.
ಅಕ್ಟೋಬರ್‌ನಲ್ಲಿ ಶೇ.10.7, ಸೆಪ್ಟೆಂಬರ್‌ನಲ್ಲಿ ಶೇ.9.9ಕ್ಕೆ ಹಣದುಬ್ಬರ ಪ್ರಮಾಣ ದಾಖಲಾಗಿದೆ.
1997ರಿಂದ ಇಲ್ಲಿವರೆಗಿನ ಅತ್ಯಧಿಕವಾಗಿದೆ ಎಂದು ಯೂರೋಪಿಯನ್ ಯುನಿಯನ್ ಅಂಕಿ-ಅಂಶ ಸಂಸ್ಥೆ ಯೂರೋಸ್ಟಾಟ್ ವರದಿ ಮಾಡಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈಗಾಗಲೇ ನೈಸರ್ಗಿಕ ಅನಿಲ ಮತ್ತು ವಿದ್ಯುತ್ ದರದ ಬಿಸಿಗೆ ಬ್ರೆಕ್ಸಿಟ್ ದೇಶಗಳ ನಾಗರಿಕರು ತತ್ತರಿಸಿದ್ದಾರೆ. ಇನ್ನೂ ಹಣದುಬ್ಬರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೆ ಏರಲಿದೆ. ಇದರಿಂದ ಸಾಮಾನ್ಯವಾಗಿ ಅಲ್ಲಿನ ಜೀವನ ವೆಚ್ಚ ದುಬಾರಿಯಾಗಲಿದೆ.
ಯುಕ್ರೇನ್-ರಷ್ಯಾ ಯುದ್ಧದಿಂದಾಗಿ ಉಕ್ರೇನ್‌ನಿಂದ ಸರಬರಾಜಾಗುತ್ತಿದ್ದ ನೈಸರ್ಗಿಕ ಅನಿಲ ಸ್ಥಗಿತವಾಗಿದೆ.
ಹೀಗಾಗಿ ಬೇರೆ ದಾರಿ ಇಲ್ಲದೇ ಅಮೆರಿಕ ಮತ್ತು ಕತಾರ್‌ನಿಂದ ದುಬಾರಿ ಹಣ ತೆತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳು ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುತ್ತಿವೆ. ಇದರ ಪರಿಣಾಮ ಉಕ್ಕು ಸೇರಿದಂತೆ ಕೈಗಾರಿಕಾ ಉತ್ಪನ್ನಗಳು ಹಾಗೂ ಗೊಬ್ಬರದ ಬೆಲೆ ಏರಿಕೆಯಾಗಿದೆ.