Advertisement
ಈಗಾಗಲೇ ದಕ್ಷಿಣ ಕ್ಷೇತ್ರದಲ್ಲಿ ಹೈಟೆಕ್ ಡಿಜಿಟಲ್ ಲೈಬ್ರರಿ, ಬುದ್ಧಿಮಾಂದ್ಯ-ವಿಕಲ ಚೇತನ ಮಕ್ಕಳ ಮನರಂಜನೆಗೆ ವಿಶೇಷ ಪಾರ್ಕ್, ತಿನಿಸು ಕಟ್ಟೆ (ಖಾವು ಕಟ್ಟಾ) ನಿರ್ಮಾಣ ಜೊತೆಗೆ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಎವಿಯೇಶನ್ ಸೆಂಟರ್ ಮತ್ತು ನಾಥ ಪೈ ಸರ್ಕಲ್ ಬಳಿಯ ರಸ್ತೆಯ ಡಿವೈಡರ್ ಜಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಮಳಿಗೆ ನಿರ್ಮಾಣ ಸೇರಿದಂತೆ ಹತ್ತು ಹಲವು ವಿಶೇಷ ಸವಲತ್ತುಗಳನ್ನು ತಂದು ಕೊಟ್ಟಿರುವ ಅಭಯ ಪಾಟೀಲ ಈಗ ಸ್ವತ್ಛತೆಯ ವಿಚಾರದಲ್ಲೂ ಹೈಟೆಕ್ ಮಾದರಿ ಅನುಸರಿಸಲು ಮುಂದಾಗಿದ್ದಾರೆ.
Related Articles
Advertisement
ಎರಡನೇ ಹಂತದಲ್ಲಿ 28 ಕಡೆ ಹಾಗೂ ಮೂರನೇ ಹಂತದಲ್ಲಿ 52 ಕಡೆಗಳಲ್ಲಿ ಇದರ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಬರುವ 15 ದಿನಗಳಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಹಾಪುರದಲ್ಲಿ ಈ ವಿನೂತನ ವ್ಯವಸ್ಥೆಯ ಈ ಕಾರ್ಯ ಆರಂಭವಾಗಲಿದೆ. ಈ ಭೂಗತ ಹೈಡ್ರೋಲಿಕ್ ಕಸದತೊಟ್ಟಿಗಳಲ್ಲಿ ಶೇ.50ರಷ್ಟು ಕಸ ತುಂಬಿದರೆ ನೇರವಾಗಿ ಕಸ ವಿಲೇವಾರಿ ಮಾಡುವ ಕಾರ್ಮಿಕರಿಗೆ ಇದರಸಂದೇಶ ಹೋಗುತ್ತದೆ. ನಂತರ ಶೇ.70ರಿಂದ 80 ರಷ್ಟು ಕಸ ತುಂಬಿದರೂ ಅದರ ವಿಲೇವಾರಿ ಆಗದಿದ್ದರೆ ಹಿರಿಯ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಸಂದೇಶ ಹೋಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಶತ 100ರಷ್ಟು ಕಸ ತುಂಬಿದ ನಂತರವೂ ವಿಲೇವಾರಿ ಮಾಡದೇ ಹೋದರೆ ಆಗ ಅದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು, ವಾಹನ ಮಾಲೀಕರು ಹಾಗೂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ದಂಡ ಆಕರಿಸಲಾಗುವದು ಎಂದು ಶಾಸಕ ಅಭಯ ಪಾಟೀಲ ವಿವರಿಸಿದರು. ಜನರಲ್ಲಿ ಈಗ ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿದೆ. ಎಲ್ಲೆಂದರಲ್ಲಿ ಕಸ ಹಾಕಬಾರದು ಎಂಬುದು ಅವರಿಗೂ ಮನವರಿಕೆಯಾಗಿದೆ. ಈಗ ನಾವು ಅಳವಡಿಸುತ್ತಿರುವ ಹೈಡ್ರೋಲಿಕ್ ಕಸದ ತೊಟ್ಟಿಗಳಿಂದ ಇನ್ನಷ್ಟು ಅನುಕೂಲವಾಗಲಿದೆ. ಜನರಿಗೂ ಸಹ ಇದರಲ್ಲಿ ಕಸ ಹಾಕಲು ಬಹಳ ಸುಲಭವಾಗಲಿದೆ. ನಾವು ಮಾಡುತ್ತಿರುವ ಈ ವಿನೂತನ ಯೋಜನೆಯ ಬಗ್ಗೆ ಕೇಂದ್ರದ ಸ್ಮಾಟ್ ಸಿಟಿ ಅಧಿಕಾರಿಗಳು ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ ಎಂಬುದು ಅಭಯ ಪಾಟೀಲ ಅವರ ಹೆಮ್ಮೆಯ ಮಾತು. ಕಸದ ತೊಟ್ಟಿಯಲ್ಲಿ ಒಂದು ಟನ್ ಕಸ ಸಂಗ್ರಹಿಸುವ ಸಾಮರ್ಥ್ಯ ಇದೆ. ಇದನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುವ ವಾಹನವನ್ನು 45 ಲಕ್ಷ ರೂ. ವೆಚ್ಚದಲ್ಲಿ
ಖರೀದಿಸಲಾಗಿದ್ದು ಮುಂದಿನ ವಾರ ಬೆಳಗಾವಿಗೆ ಈ ವಾಹನ ಬರಲಿದೆ. ಭೂಗತ ಹೈಡ್ರೋಲಿಕ್ ಕಸದ ತೊಟ್ಟಿಗಳನ್ನು ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದ್ದು ಶಹಾಪುರದಲ್ಲಿ ಈ ವಾರದಲ್ಲಿ ಇದರ ಕೆಲಸ ಪೂರ್ಣಗೊಳ್ಳಲಿದೆ. ಕೇಶವ ಆದಿ