Advertisement

ಯುರೋಪಿಯನ್‌ ಕಪ್‌ ಫ‌ುಟ್‌ಬಾಲ್‌; ಬೇಯರ್ನ್ ಮ್ಯೂನಿಚ್‌ಗೆ 6ನೇ ಕಿರೀಟ

10:34 PM Aug 24, 2020 | mahesh |

ಲಿಸ್ಟನ್‌: ರವಿವಾರದ ಜಿದ್ದಾಜಿದ್ದಿ ಚಾಂಪಿಯನ್ಸ್‌ ಲೀಗ್‌ ಫ‌ುಟ್‌ಬಾಲ್‌ ಫೈನಲ್‌ನಲ್ಲಿ ಬಲಿಷ್ಠ “ಪ್ಯಾರಿಸ್‌ ಸೇಂಟ್‌ ಜರ್ಮೈನ್‌’ (ಪಿಎಸ್‌ಜಿ) ತಂಡವನ್ನು ಏಕೈಕ ಗೋಲಿನಿಂದ ಮಣಿಸಿದ “ಬೇಯರ್ನ್ ಮ್ಯೂನಿಚ್‌’ ಪಡೆ ಯುರೋಪಿಯನ್‌ ಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Advertisement

ವೀಕ್ಷಕರ ಗೈರಲ್ಲಿ ನಡೆದ ಈ ಮುಖಾಮುಖಿಯ 59ನೇ ನಿಮಿಷದಲ್ಲಿ ಕಿಂಗ್‌ಸ್ಲೆ ಕಾಮನ್‌ ತಲೆ ಮೂಲಕ ಸಿಡಿಸಿದ ಗೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದು 2013ರ ಬಳಿಕ ಬೇಯರ್ನ್ ಮ್ಯೂನಿಚ್‌ತಂಡಕ್ಕೆ ಒಲಿದ ಮೊದಲ ಹಾಗೂ ಒಟ್ಟಾರೆಯಾಗಿ 6ನೇ ಯುರೋಪಿಯನ್‌ ಕಪ್‌ ಆಗಿದೆ.

ಬೇಯರ್ನ್ ಮ್ಯೂನಿಚ್‌ ಕೂಟದ ಎಲ್ಲ 11 ಪಂದ್ಯಗಳನ್ನು ಗೆದ್ದು ಅಜೇಯ ಓಟ ಬೆಳೆಸಿತು. ಒಟ್ಟು 43 ಗೋಲು ಸಿಡಿಸಿ ಪರಿಪೂರ್ಣ ಪ್ರದರ್ಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next