ಸ್ಪೇನ್ ಪರ ನಿಕೋ ವಿಲಿಯಮ್ಸ್ 47ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. 73ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಕೋಲ್ ಪಾಮರ್ ಪಂದ್ಯ ವನ್ನು ಸಮಬಲಕ್ಕೆ ತಂದರು. ಸ್ಪೇನ್‌ನ ಗೆಲುವಿನ ಗೋಲು 86ನೇ ನಿಮಿಷ ದಲ್ಲಿ ಮೈಕಲ್ ಒಯರ್ಝಬಾಲ್ ಅವರಿಂದ ಸಿಡಿಯಿತು.
Advertisement
ಬ್ಯಾಕ್‌ಅಪ್ ಸ್ಟ್ರೈಕರ್ ಆಗಿರುವ ಒಯರ್ಝಬಾಲ್ ನಾಯಕ ಅಲ್ವಾರೊ ಮೊರಾಟ ಅವರಿಗೆ ಬದಲಿ ಯಾಗಿ ಆಡಲಿಳಿದಿದ್ದರು. ಇವರ ಪರಾಕ್ರಮದಿಂದ ಪಂದ್ಯ ಹೆಚ್ಚುವರಿ ಅವಧಿ ಯತ್ತ ಹೊರಳು ವುದು ತಪ್ಪಿತು.
ಸ್ಪೇನ್ ಇದಕ್ಕೂ ಮುನ್ನ 1964, 2008 ಮತ್ತು 2012ರಲ್ಲಿ ಯೂರೋಪಿ ಯನ್ ಚಾಂಪಿಯನ್ ಎನಿಸಿ ಕೊಂಡಿತ್ತು. ಈ ಬಾರಿ ಎಲ್ಲ 7 ಪಂದ್ಯ ಗಳನ್ನು ಗೆದ್ದು ಪಾರಮ್ಯ ಸಾಧಿ ಸುವ ಜತೆಗೆ, ಕೂಟವೊಂದರಲ್ಲಿ ಸರ್ವಾಧಿಕ 15 ಗೋಲು ಬಾರಿಸಿದ ದಾಖಲೆ ಯನ್ನೂ ಸ್ಥಾಪಿಸಿತು.
ಚಾಂಪಿಯನ್ ಆದೊಡನೆಯೇ ಸ್ಪೇನ್ ಫುಟ್ಬಾಲಿಗರೆಲ್ಲ “ಕಿಂಗ್ಸ್ ಆಫ್ ಯೂರೋಪ್’ ಎಂದು ಬರೆದ ಜೆರ್ಸಿಯನ್ನು ಧರಿಸಿ ವಿಜಯೋತ್ಸವ ಆಚರಿ ಸಿದರು. ಜೆರ್ಸಿಯ ಹಿಂದೆ “4′ ಎಂದು ಬರೆದಿತ್ತು.
Related Articles
ಜು. 14ರ ರವಿವಾರ ಸ್ಪೇನ್ ಪಾಲಿಗೆ ಅವಳಿ ಕ್ರೀಡಾ ಸಂಭ್ರಮದ ದಿನವಾಗಿತ್ತು. ಸ್ಪೇನ್ ಯೂರೋ ಕಪ್ ಗೆಲ್ಲುವ ಕೆಲವೇ ಗಂಟೆಗಳ ಮೊದಲು ಕಾರ್ಲೋಸ್ ಅಲ್ಕರಾಜ್ ವಿಂಬಲ್ಡನ್ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಮ್ಯಾಡ್ರಿಡ್‌ನ ದೈತ್ಯ ಪರದೆಯಲ್ಲಿ ಈ ಎರಡೂ ಗೆಲುವನ್ನು ಕಂಡ ಸ್ಪೇನ್ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
Advertisement
6 ಮಂದಿಗೆ ಗೋಲ್ಡನ್ ಬೂಟ್!ಯುರೋ ಕಪ್ 2024ರ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 6 ಆಟಗಾರರು ಹಂಚಿಕೊಂಡರು. ಇವರೆಲ್ಲರೂ ತಲಾ 3 ಗೋಲು ಬಾರಿಸಿದ್ದರು. ಇವರೆಂದರೆ ಸ್ಪೇನ್‌ನ ಡ್ಯಾನಿ ಒಲ್ಮೊ, ಜಾರ್ಜಿಯಾದ ಜಾರ್ಜಸ್ ಮಿಕೌಟೇಝ್, ನೆದರ್ಲೆಂಡ್ಸ್‌ನ ಗೋಡಿ ಗಪ್ಕೊ, ಸ್ಲೊವಾಕಿಯಾದ ಇವಾನ್ ಶ್ರಾಂಝ್, ಜರ್ಮನಿಯ ಜಮಾಲ್ ಮುಸಿಯಾಲ ಮತ್ತು ಇಂಗ್ಲೆಂಡ್‌ನ ಹ್ಯಾರಿ ಕೇನ್.