ನವದೆಹಲಿ: ಸುಡಾನ್ ನ ಖಾರ್ಟೂಮ್ ನಿಂದ ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ವಿಮಾನ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ಬರೋಬ್ಬರಿ 37,000 ಅಡಿ ಎತ್ತರದಲ್ಲಿದ್ದಾಗ ಇಬ್ಬರೂ ಪೈಲಟ್ ಗಳು ನಿದ್ರೆಗೆ ಶರಣಾಗಿರುವ ಘಟನೆ ನಡೆದಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ; ನಾಲ್ವರು ಅರೆಸ್ಟ್
37 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಇಬ್ಬರೂ ಪೈಲಟ್ ಗಳು ನಿದ್ರೆಗೆ ಜಾರಿದ್ದರು. ವಿಮಾನ ನಿಗದಿತ ವೇಳೆಯಲ್ಲಿ ಅಡಿಸ್ ಅಬಾಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯದೇ ಮುಂದೆ ಸಾಗಿತ್ತು.!
ಅಪಾಯದ ಮುನ್ಸೂಚನೆ ಅರಿತ ಏರ್ ಟ್ರಾಫಿಕ್ ಕಂಟ್ರೋಲರ್ ಹಲವಾರು ಬಾರಿ ಪೈಲಟ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಕೂಡಾ ಸಾಧ್ಯವಾಗಿರಲಿಲ್ಲ ಎಂದು ವರದಿ ವಿವರಿಸಿದೆ. ನಂತರ ಇಥಿಯೋಪಿಯನ್ ಏರ್ ಲೈನ್ಸ್ ನ ಆಟೋ ಪೈಲಟ್ ಸಂಪರ್ಕ ಕಡಿತಗೊಂಡ ಪರಿಣಾಮ, ಅಪಾಯದ ಕರೆಗಂಟೆ ಶಬ್ದದಿಂದ ಪೈಲಟ್ ಎಚ್ಚರಗೊಂಡಿರುವುದಾಗಿ ವರದಿ ತಿಳಿಸಿದೆ.
ಅಡಿಸ್ ಅಬಾಬಾ ರನ್ ವೇ ದಾಟಿ ಸುಮಾರು 25 ನಿಮಿಷಗಳ ನಂತರ ಪೈಲಟ್ ಗಳಿಗೆ ಎಚ್ಚರವಾಗಿದ್ದು, ಬಳಿಕ ಪೈಲಟ್ ಸುರಕ್ಷಿತವಾಗಿ ಅಡಿಸ್ ಅಬಾಬಾ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
“37 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಇಥಿಯೋಪಿಯನ್ ಏರ್ ಲೈನ್ಸ್ ಇಬ್ಬರು ಪೈಲಟ್ ಗಳು ನಿದ್ರೆಗೆ ಶರಣಾಗಿರುವುದು ತೀವ್ರ ಕಳವಳಕಾರಿ ವಿಚಾರವಾಗಿದೆ” ಎಂದು ಏವಿಯೇಷನ್ ತಜ್ಞ ಅಲೆಕ್ಸ್ ಮೆಕೆರಾಸ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.