Advertisement

StreamFest: ಶುಭಸುದ್ದಿ ನೀಡಿದ ನೆಟ್ ಫ್ಲಿಕ್ಸ್: ಮತ್ತೆರೆಡು ದಿನ ಉಚಿತ ಸೇವೆ !

03:41 PM Dec 09, 2020 | Mithun PG |

ನವದೆಹಲಿ: ಮೊದಲ ಹಂತದ ನೆಟ್ ಫ್ಲಿಕ್ಸ್ Stream Fest  ಯಶಸ್ಸಿನ ಬೆನ್ನಲ್ಲೆ, ಇದೀಗ ಎರಡನೇ ಹಂತದ ಉಚಿತ ಸೇವೆ ಆರಂಭಗೊಂಡಿದೆ. ಇಂದಿನಿಂದ (ಡಿ.9) ಶುಕ್ರವಾರದವರೆಗೂ (ಡಿ.11) 2 ದಿನಗಳು ಉಚಿತವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬರುವ ಸಿನಿಮಾ, ವೆಬ್ ಸೀರಿಸ್  ಮತ್ತು ಇತರ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವಿದೆ.

Advertisement

ಈಗಾಗಲೇ ಸ್ಟ್ರೀಮಿಂಗ್ ಫೆಸ್ಟ್ ಜಗತ್ತಿನ ಅತೀ ದೊಡ್ಡ ಸ್ಟ್ರೀಮಿಂಗ್ ಸರ್ವಿಸ್ ಎಂದು ಹೆಸರುವಾಸಿಯಾಗಿದೆ.  ನಿಗದಿತ ಬಳಕೆದಾರರು ಮಾತ್ರ ಇಲ್ಲಿ ಉಚಿತ ಸೇವೆ ಪಡೆಯಬಹುದಾಗಿದ್ದು, ಆದರೇ ಇಲ್ಲಿ ಹೆಚ್ ಡಿ (ಹೈ ಢೆಫಿನೇಶನ್) ವಿಡಿಯೋಗಳು ಲಭ್ಯವಿರುವುದಿಲ್ಲ. ಯಾವುದೇ ಅಕೌಂಟ್ ಕ್ರಿಯೇಟ್ ಮಾಡದೇ ಕೆಲವೊಂದು ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ಮಾತ್ರ ವೀಕ್ಷಿಸಬಹುದಾಗಿದೆ.

ನೆಟ್ ಫ್ಲಿಕ್ಸ್ ಉಚಿತ ಸೇವೆ ಆ್ಯಂಡ್ರಾಯ್ಡ್, ಐಫೋನ್, ಸ್ಮಾರ್ಟ್ ಟಿವಿ ಮುಂತಾದವುಗಳಲ್ಲಿ ದೊರಕುತ್ತಿದೆ, Netflix.com/StreamFest ಈ ಲಿಂಕ್ ಬಳಸಿ ಹೆಸರು, ಇಮೇಲ್ ವಿಳಾಸ, ಪಾಸ್ ವರ್ಡ್ ನಮೂದಿಸಿದರೇ ಉಚಿತ ಸೇವೆ ಪಡೆಯಬಹುದು.

ಇದನ್ನೂ ಓದಿ: 2021ರ ಏಪ್ರಿಲ್ ನಿಂದ ಟೇಕ್ ಹೋಮ್ ಸ್ಯಾಲರಿ ಮತ್ತಷ್ಟು ಕಡಿತ…ಏನಿದು ಹೊಸ ನಿಯಮ?

ಮೊದಲ ಹಂತದ ಸ್ಟ್ರೀಮ್ ಫೆಸ್ಟ್ ನ ಲಾಭ ಪಡೆದವರು ಮತ್ತೊಮ್ಮೆ ಉಚಿತವಾಗಿ ಲಾಗಿನ್ ಆಗಲು ಅವಕಾಶವಿಲ್ಲ ಎಂದು ವರದಿಯಾಗಿದೆ.  ಅದಾಗ್ಯೂ ಮುಂದಿನ ದಿನಗಳಲ್ಲಿ ಸ್ಟ್ರೀಮಿಂಗ್ ಫೆಸ್ಟ್ ಮತ್ತೊಮ್ಮೆ  ಬಳಕೆದಾರರನ್ನು ತಲುಪಲು ಸಿದ್ದವಾಗುತ್ತಿದೆ ಎಂದು ಹೇಳಲಾಗಿದೆ.

Advertisement

ಇದನ್ನೂ ಓದಿ:  ಆ್ಯಪಲ್ ನ ಮೊದಲ Headphone ಬಿಡುಗಡೆ: ಇದರ ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next