Advertisement

ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಸ್ತು

06:25 AM Mar 08, 2018 | Team Udayavani |

ಬೆಂಗಳೂರು: ರಾಜ್ಯದ ಮಾದಿಗ ಸಮುದಾಯದ ಅಭಿವೃದ್ಧಿಗೆ ಆರ್ಥಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು “ಡಾ. ಬಾಬು ಜಗಜೀವನರಾಮ್‌ ಅಭಿವೃದ್ಧಿ ನಿಗಮದ’ ಹೆಸರಲ್ಲಿ ಪ್ರತ್ಯೇಕ ಮಾದಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಪ್ರಸ್ತಾವನೆಗೆ ಸರ್ಕಾರದ ಹಸಿರು ನಿಶಾನೆ ಸಿಕ್ಕಿದೆ.

Advertisement

ಬುಧವಾರ ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈಗ ಅದಕ್ಕೆ ಸರ್ವಾನುಮತದ ಅನುಮತಿ ಸಿಕ್ಕಿದೆ.

ಈಗಾಗಲೇ ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ ಇದೆ. ಅದೇ ಮಾದರಿಯಲ್ಲಿ ಮಾದಿಗ ಸಮುದಾಯದ ಅಭಿವೃದ್ಧಿಗೆ ಡಾ. ಬಾಬು ಜಗಜೀವನರಾಮ್‌ ಅಭಿವೃದ್ದಿ ನಿಗಮ ಕೆಲಸ ಮಾಡಲಿದೆ. ಇದಕ್ಕೆ ಪ್ರತಿ ವರ್ಷ 500 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದರು.

ಒಳಮೀಸಲಾತಿ ಕುರಿತು ಕೆಲವರಲ್ಲಿ ಗೊಂದಲಗಳಿದ್ದು, ನಮ್ಮನ್ನು ಎಸ್ಟಿ ಪಟ್ಟಿಯಿಂದ ಕೈಬಿಡುತ್ತಾರೆ ಎಂದು ಭೋವಿ ಮತ್ತು
ಲಂಬಾಣಿ ಸಮುದಾಯ ಅನುಮಾನಗೊಂಡಿದ್ದಾರೆ. ಹಾಗೆ ಇಲ್ಲ ಎಂದು ನಾವು ಹೇಳಿದರೂ ನಂಬುತ್ತಿಲ್ಲ. ಈ ಬಗ್ಗೆ ಸಚಿವ
ಸಂಪುಟದ ಉಪಸಮಿತಿ ರಚಿಸುವ ಬಗ್ಗೆ ತೀರ್ಮಾನವಾಗಿದೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು.

– ಎಚ್‌. ಆಂಜನೇಯ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next