Advertisement

ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಲಿ: ಚಂದ್ರಶೇಖರ

04:54 PM Feb 26, 2018 | Team Udayavani |

ಲಿಂಗಸುಗೂರು: ಕುಂಬಾರ ಇಲ್ಲದ ಗ್ರಾಮ ಇಲ್ಲ, ಕುಂಬಾರ ಇಡೀ ಗ್ರಾಮಕ್ಕೆ ಮುಕುಟ ಇದ್ದಂತೆ. ಕುಂಬಾರ ಸಮಾಜ
ಹಿಂದುಳಿದಿದ್ದು, ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಕುಂಬಾರ ಆಗ್ರಹಿಸಿದರು.

Advertisement

ಪಟ್ಟಣದಲ್ಲಿ ರವಿವಾರ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ಕುಂಬಾರ ಸಮಾವೇಶ ಹಾಗೂ ಭವನದ ಅಡಿಗಲ್ಲು ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ಕುಂಬಾರ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ನೀಡಬೇಕು. ಕನ್ನಡ ಸಾಹಿತ್ಯ ಲೋಕಕ್ಕೆ ಸರ್ವಜ್ಞರ ಕೊಡುಗೆ ಅಪಾರವಾಗಿದೆ. ಅತ್ಯಂತ ಸರಳ ಭಾಷೆಯಲ್ಲಿ
ತ್ರಿಪದಿ ರಚಿಸಿದ್ದಾರೆ. ಸರ್ವಜ್ಞ ವಚನಗಳ ಬಗ್ಗೆ ಅನೇಕ ವಿದ್ವಾಂಸರು ಸಂಶೋಧನೆ ಮಾಡಿದ್ದಾರೆ. ಸರ್ವಜ್ಞ ಎಂದರೆ ಒಂದು ಶಬ್ದಕೋಶವಿದ್ದಂತೆ. ಸರ್ವಜ್ಞ ಇಡೀ ಮಾನವ ಕುಲದ ಆಸ್ತಿಯಾಗಿದ್ದಾರೆ. ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಎಂದರು. ಪುರಸಭೆ ಅಧ್ಯಕ್ಷ ಖಾದರ ಪಾಷಾ, ನಿವೃತ್ತ ನ್ಯಾಯಾಧೀಶ ಎ.ಪಂಪಾಪತಿ ಕುಂಬಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಕುಂಬಾರ ಸಂಘದ ಅಧ್ಯಕ್ಷ ನೆಂಬೆಣ್ಣ ಕರಡಕಲ್‌, ವೀರೇಶ ಚಕ್ರಸಾಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next