Advertisement
ಸರ್ರೆ ತಂಡದ ಪರ ಆಡುತ್ತಿರುವ ಸಂಗಕ್ಕರ ಚೇಮ್ಸ್‌ಫರ್ಡ್‌ನಲ್ಲಿ ಎಸೆಕ್ಸ್ ವಿರುದ್ಧ ನಡೆದ “ಡಿವಿಷನ್ ಒನ್’ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 84 ರನ್ನಿಗೆ ಔಟಾಗುವುದರೊಂದಿಗೆ ಇತಿಹಾಸದಿಂದ ದೂರವೇ ಉಳಿಯಬೇಕಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 200 ರನ್ ಬಾರಿಸಿದ್ದರು. ಇದಕ್ಕೂ ಹಿಂದಿನ ಸತತ 4 ಇನ್ನಿಂಗ್ಸ್‌ಗಳಲ್ಲಿ 136, 105, 114 ಮತ್ತು 120 ರನ್ ಬಾರಿಸಿದ ಸಾಧನೆಯೊಂದಿಗೆ ಸಂಗಕ್ಕರ ಗುರುತಿಸಲ್ಪಟ್ಟಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ 6 ಶತಕ ಬಾರಿಸಿದ ವಿಶ್ವದಾಖಲೆ ಮೂವರ ಹೆಸರಲ್ಲಿದೆ. ಈ ಸಾಧಕರೆಂದರೆ ಸಿ.ಬಿ. ಫ್ರೈ (1901), ಡಾನ್ ಬ್ರಾಡ್‌ಮನ್ (1938-39) ಮತ್ತು ಮೈಕ್ ಪ್ರಾಕ್ಟರ್ (1970-71). ಸತತ 5 ಶತಕಗಳನ್ನು ಬಾರಿಸಿದ ಇತರರೆಂದರೆ ಎವರ್ಟನ್ ವೀಕ್ಸ್ (1955-56), ಬ್ರಿಯಾನ್ ಲಾರಾ (1993-94), ಮೈಕ್ ಹಸ್ಸಿ (2003) ಮತ್ತು ಪಾರ್ಥಿವ್ ಪಟೇಲ್ (2007-08).