ಬೆಂಗಳೂರು : ರಾಷ್ಟ್ರ ಭಕ್ತ ಎಂಬ ಕಾರಣಕ್ಕೆ ಈಶ್ವರಪ್ಪನವರ ಮೇಲೆ ನಮಗೆ ಹೆಮ್ಮೆ ಹಾಗೂ ಗೌರವ ಇದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಶಿವಮೊಗ್ಗ ಕೊಲೆ ಪ್ರಕರಣದ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ.ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಹಿಜಾಬ್ ಹಾಗೂ ಇನ್ನಿತರ ವಿವಾದ ಕಾರಣದಿಂದ ಅಧಿವೇಶನ ಒಂದು ವಾರಗಳ ಕಾಲ ಸ್ಥಗಿತಗೊಂಡಿದೆ.ಸಾಮಾನ್ಯ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ನಡೆಯಬೇಕಾಗಿದ್ದ ಸದನ ಈ ರೀತಿ ಸ್ಥಗಿತಗೊಂಡ ಉದಾಹರಣೆ ಇಲ್ಲ .ಸದನ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜನರ ಸಮಸ್ಯೆಗಳು ನಿವಾರಣೆಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿ ಮಾಡಿದ್ದೆವು.ಈಗ ಶಿವಮೊಗ್ಗ ಘಟನೆ, ಹಿಜಾಬ್ ಘಟನೆ ಸಾಮಾನ್ಯ ಜನರ ಬದುಕಿಗೆ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಆಡಳಿತ ಹಾಗೂ ವಿಪಕ್ಷ ಎರಡಕ್ಕೂ ಇದೆ ಎಂದು ಅಭಿಪ್ರಾಯ ಪಟ್ಟರು.
ರಾಷ್ಟ್ರ ಧ್ವಜದ ಬಗ್ಗೆ ಈಶ್ವರಪ್ಪ ಗೌರವದ ಮಾತನ್ನು ಆಡಿದ್ದಾರೆ. ಅದರಲ್ಲಿ ಯಾವ ಗೊಂದಲ ಇಲ್ಲ, ಅವರ ಹೇಳಿಕೆಯನ್ನು ಸರ್ಕಾರವೂ ಸಮರ್ಥನೆ ಮಾಡಿದೆ. ರಾಷ್ಟ್ರ ಧ್ಬಜದ ಬಗ್ಗೆ ಅವರು ಅತ್ಯಂತ ಗೌರವ ಹೊಂದಿದ್ದಾರೆ.ರಾಷ್ಟ್ರ ಭಕ್ತ ಎಂಬ ಕಾರಣಕ್ಕಾಗಿ ಈಶ್ವರಪ್ಪ ಬಗ್ಗೆ ನಾವು ಗೌರವ ಹೆಮ್ಮೆಯಿಂದ ಇದ್ದೇವೆ ಎಂದರು.