Advertisement
ಜಪಾನಿನ ಇಶಿಮ ಒಹಶಿ ಸೇತುವೆ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಹಾಗೂ ಅತ್ಯಂತ ಕಡಿದಾದ ಇಳಿಜಾರನ್ನು ಹೊಂದಿರುವ ಸೇತುವೆ. ಇದನ್ನು ನಕೂಮಿ ಸರೋವರಕ್ಕೆ ಅಡ್ಡವಾಗಿ ನಿರ್ಮಿಸಲಾಗಿದೆ. ಇದು ಜಪಾನಿನ ಎರಡು ಪ್ರಮುಖ ನಗರಗಳಾದ ಮ್ಯಾಟ್ಸು ಶಿಮನೆ ಹಾಗೂ ಸಕೈಮಿನಾಟೊ ಟೊಟ್ಟೊರಿ ನಗರಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಇದರಲ್ಲಿ ವಾಹನಗಳ ಓಡಾಟಕ್ಕೆ ಎರಡು ಬೇರೆ ಬೇರೆ ಲೇನ್‌ಗಳಿವೆ.
ಸೇತುವೆಯ ಅಡಿಯಲ್ಲಿ ಹಡಗುಗಳು ಸಲೀಸಾಗಿ ಡಾಡಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಇಶಿಮ ಒಹಶಿ ಸೇತುವೆ ನಿರ್ಮಾಣವನ್ನು 1997ರಲ್ಲಿ ಪ್ರಾರಂಭಿಸಿ 2004ರಲ್ಲಿ ಸಾರ್ವಜನಿಕರ ಸೇವೆಗೆ ತೆರೆಯಲಾಯಿತು. ಇದೀಗ ಇದು ಪ್ರವಾಸಿಗರ ಮುಖ್ಯ ತಾಣವಾಗಿದೆ. ಈ ಸೇತುವೆ ಮೇಲೆ 40 ಕಿ.ಮಿ.ಗಿಂತ ಹೆಚ್ಚಿನ ವೇಗದಲ್ಲಿ ವಾಹನವನ್ನು ಚಲಾಯಿಸುವಂತಿಲ್ಲ. ಅಧುನಿಕ ಜಗತ್ತಿನ ವಿಸ್ಮಯ
ವಾಸ್ತುಶಿಲ್ಪದ ಮೂಲಕ ಸೃಷ್ಟಿಸಲಾದ ಅದ್ಭುತಗಳನ್ನು ಪ್ರಪಂಚದಾದ್ಯಂತ ಕಾಣಬಹುದು. ತಾಜ್‌ಮಹಲ್, ಪೀಸಾ ಗೋಪುರ, ಪಿರಮಿಡ್ ಅದಕ್ಕೆ ಕೆಲ ಉದಾಹರಣೆಗಳು. ಆಧುನಿಕ ಪ್ರಪಂಚದ ವಾಸ್ತು ವಿಸ್ಮಯಗಳಾದ ಬುರ್ಜ್ ಖಲೀಫಾ, ದುಬೈನ ಇನಿ³ನಿಟಿ ಟವರ್ ಸಹ ಈ ಗುಂಪಿಗೆ ಸೇರುತ್ತವೆ. ಇಶಿಮ ಒಹಶಿ ಸೇತುವೆ ಕೂಡಾ ಈ ಸಾಲಿಗೆ ಸೇರುತ್ತದೆ.
Related Articles
ಸೇತುವೆ ಮೇಲೆ ಚಲಿಸುವ ವಾಹನಗಳು ಏರನ್ನು ಹತ್ತುತ್ತಿರುವಂತೆ ತೋರುವುದರಿಂದ ಎಲ್ಲಿ ಕೆಳಕ್ಕೆ ಜಾರಿ ಬೀಳುವುದೋ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ. ಈ ಭ್ರಮೆಯನ್ನು “ಆಪ್ಟಿಕಲ್ ಇಲ್ಯೂಶನ್’ (ನೋಟದ ಭ್ರಮೆ) ಎನ್ನುತ್ತಾರೆ.
Advertisement
– ಪುರುಷೋತ್ತಮ್