Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ಈಗಾಗಲೇ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಡಿ.ವಿ. ಸದಾನಂದಗೌಡ ಸೇರಿ ದಂತೆ ಅನೇಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಆದರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ. ಇದರಿಂದ ಹತಾಶರಾಗಿರುವ ಬಿಜೆಪಿ ನಾಯಕರು ಪ್ರಚಾರಕ್ಕೆ ಎಸ್.ಎಂ.ಕೃಷ್ಣ ಅವರನ್ನು ಕರೆತಂದಿದ್ದಾರೆ ಎಂದರು.
Related Articles
Advertisement
ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.ಎಂ. ರೇವಣ್ಣ ಮಾತನಾಡಿ, ಎಸ್.ಎಂ. ಕೃಷ್ಣ ಅವರು ಪ್ರಧಾನಿ ಹಾಗೂ ರಾಷ್ಟ್ರಪತಿ ಸ್ಥಾನಗಳೆರಡನ್ನು ಬಿಟ್ಟು ಉಳಿದ ಎಲ್ಲಾ ಸ್ಥಾನಮಾನಗಳನ್ನೂ ಕಾಂಗ್ರೆಸ್‌ನಲ್ಲಿ ಅನುಭವಿಸಿದ್ದಾರೆ. ಆದರೆ ಅವರು ಸಾಮಾಜಿಕ ನ್ಯಾಯ, ಬಡತನ ನಿವಾರಣೆ, ರೈತರಿಗೆ ನೀಡಿದ ಕೊಡುಗೆಯಾದರೂ ಏನು?. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಸರ್ಕಾರವನ್ನು ದೂರದೃಷ್ಟಿ ಇಲ್ಲದ ಸರ್ಕಾರ ಎಂದು ಕರೆಯಲು ಎಸ್.ಎಂ.ಕೃಷ್ಣ ಅವರಿಗೆ ನೈತಿಕತೆ ಇಲ್ಲ ಎಂದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇದು ಅತ್ಯಂತ ಕೆಟ್ಟ ಸರ್ಕಾರ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ. ಆದರೆ ಬಿಜೆಪಿ ಸರ್ಕಾರವನ್ನು ಗಣಿದಣಿಗಳು ನಡೆಸುತ್ತಿದ್ದ ಸಂದರ್ಭ, ಭ್ರಷ್ಟಾಚಾರ ಪ್ರಕರಣದಿಂದ ಅನೇಕ ಸಚಿವರು ಹೊರ ಬಂದು, ಆ ಸರ್ಕಾರದಲ್ಲಿದ್ದ ಬಹುತೇಕ ಎಲ್ಲರೂ ಭ್ರಷ್ಟರಾಗಿದ್ದರಿಂದ ಜನರು ಅವರನ್ನು ದೂರ ಇಟ್ಟಿದ್ದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.