Advertisement

ಅಧಿಕ ಪಿಂಚಣಿ ಜಾರಿ: ಇಪಿಎಫ್ಒ ಮಾರ್ಗಸೂಚಿ ಬಿಡುಗಡೆ

07:30 PM Dec 30, 2022 | Team Udayavani |

ನವದೆಹಲಿ: ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಅನುಷ್ಠಾನ ಮಾಡುವಂತೆ ಸೂಚಿಸಿ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ತನ್ನ ಎಲ್ಲ ಕ್ಷೇತ್ರಾಧಿಕಾರಿಗಳಿಗೆ ಸುತ್ತೋಲೆ ರವಾನಿಸಿದೆ.

Advertisement

ಅಧಿಕ ಪಿಂಚಣಿಗೆ ಅರ್ಹರಾದ ನೌಕರರು ಯಾರು, ಅಗತ್ಯವಿರುವ ದಾಖಲೆಗಳು ಯಾವುವು ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರಬೇಕು ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಮಾರ್ಗಸೂಚಿಯನ್ನೂ ಇಪಿಎಫ್ಒ ಬಿಡುಗಡೆ ಮಾಡಿದೆ. ಜತೆಗೆ 8 ವಾರಗಳ ಒಳಗಾಗಿ ಸುಪ್ರೀಂ ಆದೇಶವನ್ನು ಜಾರಿ ಮಾಡುವಂತೆಯೂ ಸೂಚಿಸಲಾಗಿದೆ.

ಇಪಿಎಫ್ ಯೋಜನೆಯನ್ವಯ ಯಾರು ಅಧಿಕ ವೇತನವನ್ನು ಪಿಎಫ್ಗೆ ನೀಡಿರುತ್ತಾರೋ, ಅವರು ಅಧಿಕ ಪಿಂಚಣಿಗೆ ಅರ್ಹರಾಗುತ್ತಾರೆ. ಜತೆಗೆ, ತಮ್ಮ ನಿವೃತ್ತಿಗೂ ಮೊದಲೇ “ಅಧಿಕ ಪಿಂಚಣಿ’ ಆಯ್ಕೆಯನ್ನು ಆಯ್ದುಕೊಂಡಿದ್ದರೂ, ಅವರ ಕೋರಿಕೆಯನ್ನು ಇಪಿಎಫ್ಒ ತಿರಸ್ಕರಿಸಿದ್ದರೆ ಅಂಥವರು ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.

ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೊಂದು ಮಾದಕ ವಸ್ತು ಮಾರಾಟ ಮಳಿಗೆ! ಇದು ಸರ್ಕಾರದಿಂದಲೇ ಪರವಾನಗಿ ಹೊಂದಿರುವ ಮೊದಲ ಮಳಿಗೆ

Advertisement

Udayavani is now on Telegram. Click here to join our channel and stay updated with the latest news.

Next