Advertisement

ಪರಿಸರ ಸಂರಕ್ಷಣೆ ಇಂದಿನ ಅಗತ್ಯ

08:43 PM Jun 06, 2021 | Team Udayavani |

ಹಾಸನ: ಈಗಿನಿಂದಲಾದರೂ ಎಚ್ಚೆತ್ತುಕೊಂಡುಪರಿಸರ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿಭಾರೀ ಅನಾಹುತ ಸಂಭವಿಸಬಹುದು ಎಂದುಜಿಲ್ಲಾಧಿಕಾರಿ ಆರ್‌.ಗಿರೀಶ್‌ ಎಚ್ಚರಿಸಿದರು.

Advertisement

ನಗರದ ಕೇಂದ್ರೀಯ ಬಸ್‌ ನಿಲ್ದಾಣ ಸಮೀಪದನ್ಯಾಯಾಲಯದ ಎದುರು ಸಸಿ ನೆಡುವುದರಮೂಲಕ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಸಂರಕ್ಷಣೆಮಾಡದಿದ್ದರೆ ಅನೇಕ ಅವಘಡಗಳು ಸಂಭವಿಸುತ್ತವೆ. ಅರಣ್ಯ ನಾಶದಿಂದ ವಾತಾವರಣದ ಮೇಲೆದುಷ್ಪರಿಣಾಮ ಬೀರಿರುವುದರಿಂದ ಅನೇಕಸಮಸ್ಯೆಗಳು ತಲೆ ದೋರುತ್ತಿವೆ.

ನಿಗದಿತಅವಧಿಯಲ್ಲಿ ಮಳೆಯಾಗದೆ ರೈತರಿಗೆ ಹಾಗೂಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆಎಂದರು.ಪ್ರತಿ ಮನೆಗಳ ಮುಂದೆ ಒಂದೊಂದುಗಿಡಗಳನ್ನು ಬೆಳೆಸುವುದು ಹಾಗೂ ಜಮೀನುಗಳಲ್ಲಿಬೆಳೆಸುವುದರಿಂದ ಮರಗಳ ಹಸಿರಿನ ವಾತಾವರಣಸೃಷ್ಟಿಯಾಗುತ್ತದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ನೆಟ್ಟು ಪೋಷಿಸಬೇಕು ಎಂದರು.ಜಿಪಂ ಸಿಇಒ ಬಿ.ಎ.ಪರಮೇಶ್‌, ಉಪ ಅರಣ್ಯಸಂರಕ್ಷಣಾಧಿಕಾರಿ ಬಸವರಾಜ್‌, ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next