ಯುವತಿಯರಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿತ್ತು. ಬಹುತೇಕರು ಮತದಾನ ಮಾಡಿದ ಬಳಿಕ ಉಗುರಿಗೆ
ಹಾಕಿದ ಶಾಹಿಯ ಗುರುತನ್ನು ಮೊಬೈಲ್‌ನಲ್ಲಿ “ಸೆಲ್ಫಿ’ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಮೊದಲ ಮತದಾನದ ಖುಷಿಯನ್ನು ಹಂಚಿಕೊಂಡರು.
Advertisement
ಮತ್ತೆ ಕೆಲವರು ಪ್ರಥಮ ಮತದಾನದ ಅನುಭವವನ್ನು ಸಮಾಜಮುಖೀ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಮೂಲಕ ಸದಾ ನೆನಪಿನಲ್ಲುಳಿಯುವ ಮಾದರಿ ಕೆಲಸ ಮಾಡಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಶಿವಮೊಗ್ಗ
ನಗರದ ಪಾರ್ಕ್ ಬಡಾವಣೆ ನಿವಾಸಿ ಹಾಗೂ ಬಿಕಾಂ ವಿದ್ಯಾರ್ಥಿನಿ ವೈಭವಿ ತನ್ನ ಮೊದಲ ಮತದಾನದ ನೆನಪಿಗಾಗಿ
ವ್ಯಕ್ತಪಡಿಸಿದ ಪರಿಸರ ಕಾಳಜಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಕೆಎಚ್‌ಬಿ ಕಾಲೋನಿಯಲ್ಲಿ ಹೊಂಗೆ ಗಿಡ ನೆಟ್ಟಿದ್ದಾರೆ. ತಾವು ನೆಟ್ಟ ಗಿಡದ ಪಕ್ಕ ಕುಳಿತುಕೊಂಡು, ಕಪ್ಪು ಶಾಹಿ ಹಾಕಿದ
ಬೆರಳನ್ನು ತೋರ್ಪಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ
ಕಾರಣ ಸಾಕಷ್ಟು ಎಗ್ಸೆ„ಟ್ ಆಗಿದ್ದೆ. ಜೊತೆಗೆ ಕುತೂಹಲವಿತ್ತು. ಮತದಾನ ಮಾಡಿದ ನಂತರ ಖುಷಿಯಾಯ್ತು. ಈ ಖುಷಿಯನ್ನು ಒಳ್ಳೆಯ ಕೆಲಸ ಮಾಡುವ ಮೂಲಕ ನೆನಪಿಟ್ಟುಕೊಳ್ಳುವ ಕೆಲಸ ಮಾಡುವಂತೆ ತಂದೆ ಸಲಹೆ ನೀಡಿದರು. ಅದರಂತೆ ತಂದೆಯ ಜೊತೆ ತೆರಳಿ ಹೊಂಗೆ
ಗಿಡಗಳನ್ನು ಖರೀದಿಸಿ ನೆಟ್ಟಿದ್ದೇನೆ. ಆ ಗಿಡಗಳನ್ನು ದೊಡ್ಡದಾಗಿ ಮಾಡುವವರಿಗೂ ಪೋಷಣೆ ಮಾಡುತ್ತೇನೆ. ತಂದೆ ನೀಡಿದ ಸಲಹೆಯಿಂದ ತಮ್ಮಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗುವಂತೆ ಮಾಡಿತು. ಜೊತೆಗೆ ಮತದಾನದ ಮಹತ್ವದ ಬಗ್ಗೆಯೂ ಅರಿವು ಉಂಟು ಮಾಡಿತು ಎಂದು ವೈಭವಿ ತಿಳಿಸಿದ್ದಾರೆ.
Related Articles
ಪ್ರಕೃತಿ ಸಂರಕ್ಷಣೆಯ ಕಾರ್ಯ ಮಾಡಬೇಕೆಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದೆ.
ಈ ವಿಷಯವನ್ನು ತಮ್ಮ ಪುತ್ರಿಗೆ ತಿಳಿಸಿದ್ದೆ. ಅದರಂತೆ ಆಕೆ ಗಿಡಗಳನ್ನು ನೆಡುವುದರ ಜೊತೆಗೆ, ಪೋಷಣೆಯ ಜವಾಬ್ದಾರಿ ಹೊತ್ತಿಕೊಂಡಿದ್ದಾಳೆ. ಇದು ತಮ್ಮಲ್ಲಿ ಸಂತಸ ಉಂಟು ಮಾಡಿದೆ ಎಂದು ವೈಭವಿ ಅವರ ತಂದೆ ಕುಶಕುಮಾರ್ ತಿಳಿಸಿದ್ದಾರೆ.
Advertisement