Advertisement

“ಪರಿಸರ ಅಸಮತೋಲನ ಹಾನಿಗೆ ಕಾರಣ’

08:05 AM Jul 25, 2017 | |

ಕುಂಬಳೆ: ಪರಿಸರ ಮತ್ತು ಜೀವಜಾಲಗಳು ಪರಸ್ಪರ ಸಂಬಂಧಗಳನ್ನು ಹೊಂದಿದ್ದು, ಪರಿಸರ ಅಸಮತೋಲನ ಜೀವಜಾಲಗಳ ಹಾನಿಗೆ ಕಾರಣವಾಗುತ್ತದೆ. ಈ ಬಗೆಗಿನ ಅರಿವಿದ್ದೂ ನಾವಿಂದು ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ತೋರುತ್ತಿರುವ ನಿರಾಸಕ್ತಿ ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಅಂತರಾಳದ ಕಾಳಜಿಯೊಂದಿಗೆ ಅನುಸಂಧಾನಕ್ಕೆ ಮನಮಾಡಬೇಕೆಂದು ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಸುಖೇಶ್‌ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬಳೆ ವಲಯದ ನೇತೃತ್ವದಲ್ಲಿ ವನ ಮಹೋತ್ಸವದ ಪ್ರಯುಕ್ತ ಕಿದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಗಿಡಗಳ ನಾಟಿ ಮತ್ತು ಶಾಲಾ ಕೈತೋಟ ನಿರ್ಮಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಗತಿಬಂಧು ಸ್ವಸಹಾಯ ಸಂಘಟನೆಗಳ ಮೂಲಕ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಕೈತೋಟ ನಿರ್ಮಾಣದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸ್ತುತ್ಯರ್ಹ ವೆಂದು ಅವರು ತಿಳಿಸಿದರು.

ಕಿದೂರು ಶಾಲಾ ಮುಖ್ಯೋಪಾಧ್ಯಾಯಿನಿ ಸೌಮ್ಯಲತಾ, ಶಿಕ್ಷಕ ರಾಮ್‌ ಮಾಸ್ತರ್‌ ಕಿದೂರು, ಮಂಜುಳ, ಧನ್ಯಾ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಶೋಭಾ ಐ, ಸೇವಾ ಪ್ರತಿನಿಧ ಮೌನೇಶ್ವರಿ, ಒಕ್ಕೂಟದ ಅಧ್ಯಕ್ಷ ಕೃಷ್ಣ ಒಳಕೆರೆ, ಕಳತ್ತೂರು ಹಾಗು ಕಿದೂರು ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು, ಶಾಲಾ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next