Advertisement
ಪಟ್ಟಣದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ಆರಂಭಿಸಿರುವ ಸಿಬಿಎಸ್‌ಸಿ ವಿಭಾಗವನ್ನು ಶನಿವಾರ ಉದ್ಘಾಟಿಸಿದ ಬಳಿಕ ಮಾತನಾಡಿದರು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಇಲ್ಲಿ ಅವರಿಗೆ ಪರಿಸರದ ಬಗ್ಗೆ ಸಂಪೂರ್ಣ ತಿಳಿವಳಿಕೆ ದೊರಕಿಸಿಕೊಡಬೇಕು. ಮತ್ತು ಪರಿಸರವನ್ನು ಸ್ವಚ್ಛವಾಗಿಡುವಂತೆ ಅರಿವು ಮೂಡಿಸಬೇಕೆಂದರು.
Related Articles
Advertisement
ಮೈಸೂರು, ಚಾಮರಾಜನಗರ ಜಿಲ್ಲೆಗೆ ಅವಿನಾಭಾವ ಸಂಬಂಧ ಇದ್ದು, ರಾಜಮನೆತನದವರು ಅನೇಕ ರೀತಿಯ ಕೊಡುಗೆ ನೀಡಿದ್ದಾರೆ. ಮತ್ತಷ್ಟು ಕೊಡುಗೆ ನೀಡಲು ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.
ಹಾಗೆಯೇ ರಾಜ ವೈಭವವನ್ನು ಎರಡು ಜಿಲ್ಲೆಯ ಜನರು ಹತ್ತಿರದಿಂದ ಕಂಡಿದ್ದು, ರಾಜಮನೆತನದ ಮತ್ತಷ್ಟು ವೈಭವವನ್ನು ಪರಿಚಯಿಸಲು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಾಗುವುದೆಂದರು. ಭಾರತೀಯ ಸಂಸ್ಕೃತಿಗೆ ಇತಿಹಾಸದಲ್ಲೇ ಅತ್ಯಂತ ಹೆಸರು ಇದ್ದು, ಅದನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ಮಾಡಬೇಕು. ಸಂಸ್ಕೃತಿಯಿಂದ ಭಾರತ ಸಮೃದ್ಧಿ ಎನ್ನುವುದನ್ನು ಪ್ರತಿಯೊಬ್ಬರು ಮನಗಾನಬೇಕೆಂದರು.
ಪುಸ್ತಕ ಬಿಡುಗಡೆ: ಇದೇ ವೇಳೆ ಮಣಗಳ್ಳಿಯ ಡಿ.ಮಹದೇವಕುಮಾರ್ ಹೊರ ತಂದಿರುವ ಬುದ್ಧ ಧಮ್ಮ ಬೆಳೆಸಿದ ವೈಶ್ಯ ಸಮಾಜದ ಅನಾಥಪಿಂಡಿಕ ಪುಸ್ತಕ ಬಿಡುಗಡೆ ಮಾಡಿದರು.ವಾಸವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕುಮಾರಕೃಷ್ಣ, ಮೈಸೂರು ಸಹಾಯಕ ರೋಟರಿ ಗೌರ್ನರ್ ಅನಂತರಾಜ ಅರಸ್, ಸಂಸ್ಥೆ ಕಾರ್ಯದರ್ಶಿ ಡಾ.ಶ್ರೀಧರ್, ಉಪಾಧ್ಯಕ್ಷ ಸತ್ಯನಾರಾಯಣ, ಖಜಾಂಚಿ ಸುಮನ್, ಸಂಘಟನಾ ಕಾರ್ಯದರ್ಶಿಗಳಾದ ಚೇತನ್, ಡಾ. ಸಿ.ಪಿ.ಶರತ್, ಸಿ.ಪಿ.ವೆಂಕಟೇಶ್ ಬಾಬು, ಸಿಬಿಎಸ್‌ಸಿ ಪ್ರಾಂಶುಪಾಲರಾದ ರೀತುಮೋನಿ ಶರ್ಮ, ಮುಖ್ಯ ಶಿಕ್ಷಕಿ ಗೀತಾ, ಪ್ರಾಂಶುಪಾಲ ಸೋಮಸುಂದರ್ ಮತ್ತಿತರರಿದ್ದರು.