Advertisement
ಇಂದು ಪ್ರತಿಷ್ಠಾಪನೆಬಿಗಿ ಬಂದೋಬಸ್ತ್ ನಡುವೆ ಬಾಲರಾಮನ ವಿಗ್ರಹವನ್ನು ದೇಗುಲದ ಆವರಣಕ್ಕೆ ತರಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ನೂರಾರು ಮಂದಿ ಭಕ್ತರು ಜೈಶ್ರೀರಾಮ್ ಎಂಬ ಘೋಷಣೆ ಕೂಗಿದರು. ಗುರುವಾರ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಪ್ರಧಾನಿ ಮೋದಿ ಅಯೋಧ್ಯೆಗೆ ಜ. 21ರಂದು ತಲುಪಲಿದ್ದಾರೆ. ಜ. 22ರಂದು ಮಂದಿರ ಪ್ರತಿಷ್ಠಾ ಪನೆಯ ಕಾರ್ಯಕ್ರಮವನ್ನು ಅವರೇ ಕುಟುಂಬದ ಯಜನಮಾನನ ಸ್ಥಾನದಲ್ಲಿ ಕುಳಿತು ನಡೆಸಿಕೊಡಲಿದ್ದಾರೆ ಎಂದು ಧಾರ್ಮಿಕ ವಿಧಿವಿಧಾನ ನಡೆಸಿಕೊಡುವ ತಂಡದ ಮುಖ್ಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ಬುಧವಾರ ತಿಳಿಸಿದ್ದಾರೆ. ಸದ್ಯ ಧಾರ್ಮಿಕ ಕ್ರಿಯಾಭಾಗಗಳನ್ನು ಯಜಮಾನನ ಸ್ಥಾನದಲ್ಲಿ ಕುಳಿತು ನಡೆಸಿಕೊಡುತ್ತಿರುವ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರೇ ಯಜಮಾನರಾಗಿ ಮುಂದುವರಿಯಲಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರೇ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು. ಆವರಣ ಪ್ರವೇಶ
ಮೈಸೂರಿನ ಅರುಣ್ ಯೋಗಿರಾಜ್ ನಿರ್ಮಿಸಿದ ಮತ್ತೂಂದು ಸಣ್ಣ ಬಾಲರಾಮನ ವಿಗ್ರಹದ ಆವರಣ ಪ್ರವೇಶವನ್ನೂ ನಡೆಸಲಾಗಿದೆ.
Related Articles
ಎಚ್.ಡಿ. ಕೋಟೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ರಚಿಸಲಾಗಿರುವ ರಾಮ ಲಲ್ಲಾನ ಮೂರ್ತಿ ಕೆತ್ತನೆ ಮಾಡಲು ಪಡೆಯಲಾಗಿದ್ದ ಶಿಲೆ ಇರುವ ಸ್ಥಳಕ್ಕೆ ಪವಿತ್ರ ಕ್ಷೇತ್ರದ ಯೋಗ ಬಂದಿದೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಹಾರೋಹಳ್ಳಿ ಗ್ರಾಮದ ರಾಮದಾಸ್ ಅವರ ಜಮೀನಿಗೆ ಈಗ ಸುತ್ತಮುತ್ತಲಿನ ಗ್ರಾಮಗಳ ಜನರು ತಂಡೋಪ ತಂಡವಾಗಿ ಭೇಟಿ ನೀಡಿ ಶಿಲೆ ಇದ್ದ ಜಾಗಕ್ಕೆ ನಮಸ್ಕಾರ ಮಾಡಿ ಭಕ್ತಿ ಭಾವ ಮೆರೆಯುತ್ತಿದ್ದಾರೆ!
Advertisement
ಅದಕ್ಕೆ ಪೂರಕವಾಗಿ ಮೈಸೂರು ಅರಮನೆಯ ರಾಜಪುರೋಹಿತ ಪ್ರಹ್ಲಾದ್‌ರಾವ್ ಮತ್ತು ತಂಡ ಆಗಮಿಸಿ ಮಂಗಳವಾರ ಸಂಜೆ 5.40ರ ಗೋಧೂಳಿ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಅದರ ನೇತೃತ್ವವನ್ನು ಗಣಿ ಗುತ್ತಿಗೆದಾರ ಗುಜ್ಜೆಗೌಡನಪುರ ಶ್ರೀನಿವಾಸ್ ವಹಿಸಿದ್ದರು. ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡ ಗುಜ್ಜೆಗೌಡನಪುರ, ಹಾರೋಹಳ್ಳಿ ಗ್ರಾಮ ಸಹಿತ ಸುತ್ತಮುತ್ತಲ ಗ್ರಾಮಗಳ ನೂರಾರು ರಾಮ ಭಕ್ತರು ಪಾಲ್ಗೊಂಡಿದ್ದರು.
ಹೋಮ, ರಾಮ ಭಜನೆ ಸೇರಿ ಸುಮಾರು 1 ತಾಸಿಗೂ ಹೆಚ್ಚು ಕಾಲ ಪೂಜೆ ನೆರವೇರಿಸಲಾಯಿತು. ಈ ವೇಳೆ ಶ್ರೀರಾಮಭಕ್ತರು ಜೈ ಶ್ರೀರಾಮ್ ಜಯ ಘೋಷಣೆ ಕೂಗಿ ಸಂಭ್ರಮಿಸಿದರು.
ಪೂರ್ವ ಜನ್ಮದ ಪುಣ್ಯಜನರು ಆಗಮಿಸುತ್ತಿರುವುದು ಮತ್ತು ರಾಮ ಲಲ್ಲಾ ಮೂರ್ತಿಗೆ ಜಮೀನಿನ ಶಿಲೆಯೇ ಆಯ್ಕೆ ಯಾಗಿರುವ ಬಗ್ಗೆ ಜಮೀನಿನ ಮಾಲಕ ರಾಮ ದಾಸ್ ಮಾತನಾಡಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮನ ಮೂರ್ತಿ ನಮ್ಮ ಜಮೀನಿನಲ್ಲಿ ದೊರೆತ ಶಿಲೆಯಿಂದ ಕೆತ್ತನೆಯಾಗಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ’ ಎಂದರು.