Advertisement

Jai Sri Ram; ಹಿಂದೂ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ: ಪ್ರಿಯಾಂಕ್‌ಗೆ ಅಶೋಕ್‌ ತಿರುಗೇಟು

11:01 PM Nov 30, 2024 | Team Udayavani |

ಬೆಂಗಳೂರು: ಸಚಿವ ಪ್ರಿಯಾಂಕ್‌ ಖರ್ಗೆಯವರೇ ಹಿಂದೂಗಳು, ಹಿಂದೂ ಧಾರ್ಮಿಕ ಗುರುಗಳ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ. ಇತ್ತೀಚೆಗೆ ತಾವು ಎಲ್ಲದಕ್ಕೂ ಮೂಗು ತೂರಿಸಿಕೊಂಡು ಬರುವುದನ್ನು ನೋಡಿದರೆ ಬಹುಶಃ ತಾವೇ ಎಐಸಿಸಿ ಅಧ್ಯಕ್ಷರು ಎನ್ನುವ ಭ್ರಮೆಯಲ್ಲಿ ಇರುವಂತಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವ್ಯಂಗ್ಯವಾಡಿದ್ದಾರೆ.

Advertisement

ಅಪರಾಧ ಮಾಡಿ ಜೈ ಶ್ರೀರಾಮ ಅಂದರೆ ಎಲ್ಲವೂ ಮುಚ್ಚಿ ಹೋಗುತ್ತದೆಯೇ? ಎಂದು ಪ್ರಿಯಾಂಕ್‌ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಅಶೋಕ್‌, ಅಪರಾಧ ಮಾಡಿರುವುದು ಸ್ವಾಮೀಜಿ ಅಲ್ಲ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್‌ ಘೋಷಣೆ ಕೂಗಿದ್ದು ಕ್ರಿಮಿನಲ್‌ ಕೆಲಸ. ಸಂವಿಧಾನವನ್ನು ರಕ್ಷಿಸಬೇಕಾದ ಜಾಗದಲ್ಲಿ ಪಾಕಿಸ್ಥಾನ ಜಿಂದಾಬಾದ್‌ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡು ಆ ಸುದ್ದಿ ಬಿತ್ತರ ಮಾಡಿದ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದು ಕ್ರಿಮಿನಲ್‌ ಕೆಲಸವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮಿಂದ ಪಾಠ ಕಲಿಯಬೇಕಾ?
ಚಂದ್ರಶೇಖರನಾಥ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದ ಮೇಲೂ ಎಫ್ಐಆರ್‌ ಹಾಕಿದ್ದೀರಿ. ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು? ನಿಮ್ಮಿಂದ ನಾವು ಸಂವಿಧಾನ ರಕ್ಷಣೆಯ ಪಾಠ ಕಲಿಯಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next