ನವದೆಹಲಿ: ಪೂರ್ವ ಇಂಗ್ಲೆಂಡ್‌ನ ಲೀಸೆಸ್ಟರ್ ನಗರದಲ್ಲಿ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಅಲ್ಲಿನ ಹಿಂದೂಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರನ್ನು ಗುರಿಯಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಬುಧವಾರ ಪ್ರಧಾನಿ ಲಿಜ್ ಟ್ರುಸ್ ಅವರನ್ನು ಒತ್ತಾಯಿಸಿದೆ.
ಸೆಪ್ಟೆಂಬರ್ 4 ರಿಂದ ಲೀಸೆಸ್ಟರ್‌ನಲ್ಲಿ ಹಿಂದೂಗಳು ನಿರಂತರವಾಗಿ ಹಿಂಸಾಚಾರ ಮತ್ತು ಬೆದರಿಕೆಗೆ ಒಳಗಾಗಿದ್ದಾರೆ ಎಂದು ಯುಕೆ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಆಡಳಿತವು ಹಿಂಸೆಯನ್ನು ನಿಗ್ರಹಿಸುವುದಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಹಿಂದೂ ಜೀವಗಳು, ಘನತೆ ಮತ್ತು ಆಸ್ತಿಗಳನ್ನು ರಕ್ಷಿಸಲು ಬಲವಾದ ಮತ್ತು ತಕ್ಷಣದ ಪ್ರಯತ್ನಗಳನ್ನು ಮಾಡಬೇಕೆಂದು ನಾವು ವಿನಂತಿಸುತ್ತೇವೆ. ಇಂತಹ ಹಿಂಸಾತ್ಮಕ ಮತ್ತು ಘೋರ ದ್ವೇಷದ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಶಿಕ್ಷಾರ್ಹ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ”ಎಂದು ಕುಮಾರ್ ಅವರು ಟ್ರುಸ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾನೂನುಬಾಹಿರ ವಕ್ಫ್ ಆಸ್ತಿ: ಯುಪಿಯಲ್ಲಿ ಕಂದಾಯ ದಾಖಲೆ ಪರಿಶೀಲನೆ
ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕು ಮತ್ತು ಎಲ್ಲಾ ಹಿಂದೂಗಳಿಗೆ, ವಿಶೇಷವಾಗಿ ಲೀಸೆಸ್ಟರ್ ಮತ್ತು ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸುವವರಿಗೆ ಕಾನೂನಿನ ರಕ್ಷಣೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಹಿಂಸಾತ್ಮಕ ಮತ್ತು ಘೋರ ದ್ವೇಷದ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಬಲವಾದ ದಂಡನಾತ್ಮಕ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರ, ಭಾರತ-ಪಾಕಿಸ್ಥಾನ ಕ್ರಿಕೆಟ್ ಪಂದ್ಯದ ನಂತರ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಲೀಸೆಸ್ಟರ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಐಕ್ಯವಾಗಿ ಸೌಹಾರ್ದತೆಗಾಗಿ ಮನವಿ ಮಾಡಿದ್ದಾರೆ. ಇದುವರೆಗೆ 47 ಮಂದಿಯನ್ನು ಬಂಧಿಸಲಾಗಿದೆ.