Advertisement
ಕಾರ್ಕಳ ತಾ|ನ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಸ್ವರ್ಣ ನದಿಗೆ 108 ಕೋ.ರೂ. ವೆತ್ಛದಲ್ಲಿ ಏತ ನೀರಾವರಿ ಯೋಜನೆ ಸಿದ್ಧಗೊಂಡಿದೆ. 2020 ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೊರೊನಾ, ಲಾಕ್‌ಡೌನ್ ಕಾರಣಗಳಿಂದ ತಡೆಯಾಗಿತ್ತು. ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಗೇಟುಗಳನ್ನು ಹಾಕಲಾಗಿದೆ. ನೀರಿನ ಪೈಪ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.. ಅಜೆಕಾರು ಗ್ರಾಮಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಿ ಪರಿಶೀಲಿಸಲಾಗಿದೆ. 4 ನದಿಯಲ್ಲಿ ತುಂಬಾ ದೂರದವರೆಗೆ ನೀರು ಸಂಗ್ರಹವಾಗಿದೆ. ಸುಮಾರು 15 ಅಡಿಗಳಷ್ಟು ನೀರು ಸಂಗ್ರಹಣೆಗೊಳ್ಳುತ್ತಿದೆ.
Related Articles
Advertisement
ದಡ ಭಾಗದಲ್ಲಿ ತಡೆಗೋಡೆಯೂ ಆವಶ್ಯಕ
ಎಣ್ಣೆಹೊಳೆ ಏತ ನೀರಾವರಿ ಯೋಜನೆ ನಿರ್ಮಾಣ ಗೊಂಡ ಸ್ಥಳದ ದಡದಲ್ಲಿ ವಾಸಿಸುವ ಕುಟುಂಬಗಳ ಕೃಷಿ ಭೂಮಿಗೆ ಕೃತಕ ನೀರು ನುಗ್ಗುವ ಆತಂಕವೂ ಇದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿ ಎರಡೂ ಕಡೆಗಳ ಕೃಷಿ ಭೂಮಿಗೆ ನೆರೆ ನೀರು ಹರಿದಲ್ಲಿ ಕೃಷಿ ಫಸಲು ನಾಶವಾಗಲಿದೆ. ಇದಕ್ಕೆ ತಡೆಗೋಡೆ ನಿರ್ಮಿಸುವುದು, ಬೆಳೆಹಾನಿಗೆ ಪರಿಹಾರ ಕಲ್ಪಿಸುವ ಬಗ್ಗೆಯೂ ಚಿಂತನೆಗಳಾಗಬೇಕಿದೆ.
ಜೂ.1ಕ್ಕೆ ಸಿ.ಎಂ ಭೇಟಿ
ಹಲವು ಕಾಮಗಾರಿ ಉದ್ಘಾಟನೆ ಸಿಎಂ ಬಸವರಾಜ ಬೊಮ್ಮಾಯಿ ಜೂ.1ರಂದು ಕಾರ್ಕಳ ಕ್ಷೇತ್ರಕ್ಕೆ ಆಗಮಿಸಿ ಉದ್ಘಾಟಿಸುವ ನಿರೀಕ್ಷೆಯಿದೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಭೂಮಿ ಪೂಜೆ ಅಂದು ನೆರವೇರಿಸಲಿದ್ದಾರೆ. ಎಣ್ಣೆಹೊಳೆ ಏತ ನೀರಾವರಿ ಯೋಜನೆಉದ್ಘಾಟನೆ, ಹೆಬ್ರಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ತಾ| ಕಚೇರಿ (ಮಿನಿವಿಧಾನಸೌಧ) ಉದ್ಘಾಟನೆ ನಡೆಸಿ, ಹೆಬ್ರಿಯಲ್ಲಿ 1.5 ಕೋ.ರೂ. ವೆಚ್ಚಧ ನೂತನ ಬಸ್ ನಿಲ್ದಾಣಕ್ಕೆ ಅವರು ಭೂಮಿ ಪೂಜೆ ನೆರವೇರಿಸುವರು. ಎಣ್ಣೆಹೊಳೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಅಂತರ್ಜಲ ಹೆಚ್ಚಳ
ಕೃಷಿ, ಕುಡಿಯುವ ನೀರಿಗೆ ಒತ್ತು ನೀಡುವ ಕಾರ್ಯ ಆರಂಭದಿಂದಲೂ ನಡೆಸುತ್ತ ಬರಲಾಗಿದೆ. ಏತ ನೀರಾವರಿಯಿಂದ ಕೃಷಿ ಚಟುವಟಿಕೆಗೆ, ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಪ್ರತೀ ಮನೆಗೆ ಕುಡಿಯುವ ನೀರು ಹರಿಸುವ ಯೋಜನೆಗಳು ಕಾರ್ಯಗತ ಹಂತದಲ್ಲಿದೆ. ಒಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯಲ್ಲಿ ಕೃಷಿ, ಕುಡಿಯುವ ನೀರಿಗೆ ಆದ್ಯತೆ ನೀಡಿ ದೂರದೃಷ್ಟಿತ್ವಕ್ಕೆ ಗಮನ ನೀಡಲಾಗಿದೆ. -ವಿ.ಸುನಿಲ್‌ಕುಮಾರ್ ಇಂಧನ, ಕನ್ನಡ, ಸಂಸ್ಕೃತಿ ಸಚಿವರು
– ಬಾಲಕೃಷ್ಣ ಭೀಮಗುಳಿ