ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ 2019-20ನೇ ಆರ್ಥಿಕ ವರ್ಷದ ಬಜೆಟ್ ಮಂಡನೆಯು ಪಂ.ಸಭಾಂಗಣದಲ್ಲಿ ಫೆ.20ರಂದು ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಂ.ಉಪಾಧ್ಯಕ್ಷ ಅಬೂಬಕರ್ ಸಿದ್ದಿಕ್ ಖಂಡಿಗೆ ಬಜೆಟ್ ಮಂಡಿಸಿದರು.
ಕೃಷಿ ವಿಭಾಗದಲ್ಲಿ ಭತ್ತ, ಅಡಿಕೆ, ತೆಂಗು, ಕಾಳುಮೆಣಸು,ಗೇರು ಕೃಷಿ ಮೊದಲಾದ ಬೆಳೆಗಳಿಗೂ, ಪಶು ಸಂಗೋಪನಾ ವಿಭಾಗದ ಅಭಿವೃದ್ಧಿ , ಲೈಫ್ ಭವನ ನಿರ್ಮಾಣ ಯೋಜನೆ, ರಸ್ತೆ , ಸಾರ್ವಜನಿಕ ಕಟ್ಟಡ ಮುಂತಾದ ಮೂಲಭೂತ ಸೌಕರ್ಯಗಳಿಗೆ, ಕುಡಿ ನೀರು ಯೋಜನೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಸಮಗ್ರ ಅಭಿವೃದ್ಧಿ , ವಿಶೇಷ ಚೇತನ ಮಕ್ಕಳ ಬಡ್ಸ್ ಸ್ಕೂಲ್ ನೂತನ ಕಟ್ಟಡ ನಿರ್ಮಾಣ, ಪೋಷಕ ಆಹಾರ ವಿತರಣೆ,ಶಿಶು ಕ್ಷೇಮದ ಅಂಗವಾಗಿ ಅಂಗನವಾಡಿಗಳ ಸಮಗ್ರ ಅಭಿವೃದ್ಧಿ ಮೊದಲಾದ ಯೋಜನೆಗಳಿಗೆ ಆದ್ಯತೆ ನೀಡಿ ಬಜೆಟ್ ಮಂಡಿಸಲಾಗಿದೆ ಎಂದು ಪಂ.ಉಪಾಧ್ಯಕ್ಷರು ಹೇಳಿದರು.
ಪಂ.ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷೆಯರಾದ ಜಯಶ್ರೀ ಕುಲಾಲ್, ಆಯಿಷಾ ಎ.ಎ., ಚಂದ್ರಾವತಿ, ಪಂ.ಸದಸ್ಯರಾದ ರೂಪವಾಣಿ ಆರ್.ಭಟ್, ಹನೀಫ್ ನಡುಬೈಲ್, ಸಿದ್ದಿಕ್ ವಳಮೊಗರು,ಉದಯ ಚೆಟ್ಟಿಯಾರ್, ಸತೀಶ್ ಕುಲಾಲ್, ಐತ್ತಪ್ಪ ಕುಲಾಲ್, ಮಲ್ಲಿಕಾ, ಪುಟ್ಟಪ್ಪ , ಪುಷ್ಪಾ , ಪ್ರೇಮಾ ಎಂ., ಶಶಿಕಲಾ ಹಾಗೂ ಪಂ.ಹೆಡ್ ಕ್ಲಾರ್ಕ್ ಪಿತಾಂಬರನ್, ಅಕೌಂಟೆಂಟ್ ಐತ್ತಪ್ಪ ಮತ್ತು ಪಂ.ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು.ಪಂ.ಸಹಾಯಕ ಕಾರ್ಯದರ್ಶಿ ಅಬ್ದುಲ್ ಲತೀಫ್ ಸ್ವಾಗತಿಸಿ, ಐತ್ತಪ್ಪ ನಾಯ್ಕ ವಂದಿಸಿದರು.