Advertisement
ಕಾರ್ಕಳ ಬೈಪಾಸ್ ರಸ್ತೆಯ ಸರ್ವಜ್ಞ ವೃತ್ತದ ಪಕ್ಕದ ಜೈನ್ ಹೊಟೇಲು ಪಕ್ಕದಲ್ಲಿ ಪುರಸಭೆ ಹಾಗೂ ಕುಕ್ಕುಂದೂರು ಗ್ರಾ.ಪಂ ವ್ಯಾಪ್ತಿಯ ಗಡಿಭಾಗದಲ್ಲಿವೆ ಈ ಪಾಳುಬಿದ್ಧ ಕಟ್ಟಡಗಳು.
ತಾಲೂಕು ಪಂಚಾಯತ್ ಆಗುವ ಮೊದಲು ಬ್ಲಾಕ್ ಡೆವಲಪ್‌ಮೆಂಟ್ ಆಫಿಸರ್ (ಬಿಡಿಒ) ಕಚೇರಿ ಈ ಕಟ್ಟಡದಲ್ಲಿತ್ತು. ಬಿಡಿಒ ಕಚೇರಿ ಜತೆಗೆ ವಸತಿಗೃಹ, ದಾಸ್ತಾನು ಕೊಠಡಿ, ವಾಹನ ಶೆಡ್ ಇತ್ಯಾದಿ ಕಟ್ಟಡಗಳು ಇದರ ಅಕ್ಕಪಕ್ಕದಲ್ಲಿತ್ತು. ತಾ.ಪಂ ಇಲಾಖೆಯಾದ ಬಳಿಕ ತುಸು ಸಮಯ ಇಲ್ಲಿ ಕಾರ್ಯಾಚರಿಸಿತ್ತು. ಬಳಿಕ ಬೈಪಾಸ್ ರಸ್ತೆ ಬದಿಗೆ ಸ್ಥಳಾಂತರಗೊಂಡು ಇತ್ತೀಚೆಗಷ್ಟೆ ಸುಸಜ್ಜಿತ ತಾ.ಪಂ ಕಟ್ಟಡ ನೂತನವಾಗಿ ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ಅರ್ಧ ಎಕರೆ ಜಾಗದಲ್ಲಿರುವ ಈ 70 ವರ್ಷ ಹಳೆಯ ಕಟ್ಟಡಗಳಲ್ಲಿ ಹೆಚ್ಚಿನವು ನೆಲ ಕಚ್ಚಿವೆ. ಗೋಡೆಗಳು ಜರಿದುಬಿದ್ದಿವೆ. ಪೊದೆಗಳು ಆವರಿಸಿವೆ ಕಟ್ಟಡಗಳನ್ನು ಹುಡುಕಬೇಕಿದೆ. ಪರಿಸರ ಸ್ವತ್ಛತೆಯ ಕೊರತೆ ಎದುರಿಸುತ್ತಿದೆ. ಬೈಪಾಸ್ ರಸ್ತೆಯ ಪಕ್ಕದಲ್ಲೇ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವ್ಯರ್ಥವಾಗಿ ಬಿದ್ದಿದೆ.
Related Articles
ರಾಜೇಂದ್ರ ಬೇಕಲ್ ಅವರು ಅಧಿಕಾರಿಯಾಗಿದ್ದಾಗ ಈ ಜಾಗದಲ್ಲಿ ವಾಣಿಜ್ಯ ಉಪಯೋಗಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಜನೆ ಸಿದ್ಧಪಡಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಅದೇ ವೇಳೆಗೆ ಅವರು ವರ್ಗಾವಣೆಗೊಂಡರು. ಇದರಿಂದ ಮಹತ್ವಾಕಾಂಕ್ಷಿ ಯೋಜನೆಯೊಂದು ಮೊಟಕುಗೊಂಡಿತ್ತು. ಬಳಿಕ ಯಾರೂ ತಲೆಕೆಡಿಸಿಕೊಂಡಿಲ್ಲ.
Advertisement
ಪರಿಶೀಲಿಸಿ, ಬೇಲಿ ನಿರ್ಮಾಣಜಾಗವನ್ನು ಪರಿಶೀಲಿಸಿ, ಸರ್ವೇ ನಡೆಸಿ ತಂತಿ ಬೇಲಿ ನಿರ್ಮಿಸಿ ಸಂರಕ್ಷಿಸಿಡುವ ಕೆಲಸ ಮಾಡುತ್ತೇವೆ. ಜಾಗ ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಮುಂದೆ ಆ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಅವಕಾಶ ಕಲ್ಪಿಸಲಾಗುವುದು.
-ಕೃಷ್ಣಾನಂದ, ಮುಖ್ಯಕಾರ್ಯನಿರ್ವಹಣಾಧಿಕಾರಿ ತಾ.ಪಂ. ಕಾರ್ಕಳ ಬಳಕೆಗೆ ಯೋಗ್ಯವಾಗಿಸಿ
ಸರಕಾರಿ ಜಾಗದಲ್ಲಿರುವ ಈ ಕಟ್ಟಡ ತುಂಬಾ ವರ್ಷಗಳಿಂದ ಪಾಳು ಬಿದ್ದುಕೊಂಡಿದೆ. ಇಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯಾವುದಾದರೂ ಕಟ್ಟಡ ನಿರ್ಮಿಸಿ ಸದುಪಯೋಗ ಪಡಿಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಸಂಬಂಧಿಸಿದವರು ಅಗತ್ಯ ಕ್ರಮವಹಿಸಬೇಕು. ಶುಚಿತ್ವಕ್ಕೂ ಆದ್ಯತೆ ನೀಡಬೇಕಿದೆ.
-ಹರಿಶ್ಚಂದ್ರ ಹೆಗ್ಡೆ ನಡಿಮಾರು, ಸ್ಥಳೀಯರು ಸದುಪಯೋಗಕ್ಕೆ ತಾ.ಪಂ ವಿಫಲ
ಈ ಜಾಗದ ಒಂದು ಭಾಗದಲ್ಲಿ ವನ್ಯಜೀವಿ ವಿಭಾಗದ ಕಚೇರಿ ವರ್ಷದ ಹಿಂದೆ ನಿರ್ಮಾಣಗೊಂಡಿದೆ. ಉಳಿದ ಸ್ಥಳ ಖಾಲಿಯಿದೆ. ಸರಕಾರಿ ಕಟ್ಟಡಗಳಿಗೆ, ವಿವಿಧ ಯೋಜನೆಗಳಿಗೆ ಕಟ್ಟಡ ನಿರ್ಮಾಣ ಮಾಡಲು ಜಾಗವಿಲ್ಲ ಎನ್ನುವುದು ಆಡಳಿತ ಪ್ರತಿ ಭಾರಿ ಸಬೂಬು ಹೇಳುತ್ತದೆ. ಆದರೆ, ಇದರ ಸದುಪಯೋಗಕ್ಕೆ ಮನಸು ಮಾಡಿಲ್ಲ. ಪಾಳು ಬಿದ್ದ ತಾ.ಪಂ ಇಲಾಖೆಗೆ ಸೇರಿದ ಕಟ್ಟಡ
ಅರ್ಧ ಎಕರೆ ಜಾಗದಲ್ಲಿರುವ ಈ 70 ವರ್ಷ ಹಳೆಯ ಕಟ್ಟಡಗಳಲ್ಲಿ ಹೆಚ್ಚಿನವು ನೆಲ ಕಚ್ಚಿವೆ. ಗೋಡೆಗಳು ಜರಿದುಬಿದ್ದಿವೆ. ಪೊದೆಗಳು ಆವರಿಸಿವೆ ಕಟ್ಟಡಗಳನ್ನು ಹುಡುಕಬೇಕಿದೆ. ಪರಿಸರ ಸ್ವತ್ಛತೆಯ ಕೊರತೆ ಎದುರಿಸುತ್ತಿದೆ. ಬೈಪಾಸ್ ರಸ್ತೆಯ ಪಕ್ಕದಲ್ಲೇ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವ್ಯರ್ಥವಾಗಿ ಬಿದ್ದಿದೆ. -ಬಾಲಕೃಷ್ಣ ಭೀಮಗುಳಿ