ಬಾರ್ಬಡೊಸ್: ಕಳೆದ ಏಕದಿನ ವಿಶ್ವಕಪ್ ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡವು ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಸೋತು ಮುಖಭಂಗ ಅನುಭವಿಸಿದೆ. ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ವಿಂಡೀಸ್ ನಾಲ್ಕು ವಿಕೆಟ್ ಅಂತರದ ಗೆಲುವು ಕಂಡಿದೆ. ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಮಳೆಯ ಕಾರಣದಿಂದ 40 ಓವರ್ ಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದರೆ, ವಿಂಡೀಸ್ ಆರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಇಂಗ್ಲೆಂಡ್ ತಂಡದ ಪರ ಡಕ್ಕೆಟ್ 71 ರನ್ ಗಳಿಸಿದರೆ, ಲಿವಿಂಗ್ ಸ್ಟೋನ್ 45 ರನ್ ಮಾಡಿದರು. ನಾಯಕ ಬಟ್ಲರ್ ಅವರ ವೈಫಲ್ಯತೆ ಮುಂದುವರಿಯಿತು. ಅವರು ಗೋಲ್ಡನ್ ಡಕ್ ಗೆ ಬಲಿಯಾದರು. ವಿಂಡೀಸ್ ಪರ ಮ್ಯಾಥ್ಯೂ ಫೊರ್ಡೆ ಮತ್ತು ಅಲ್ಜಾರಿ ಜೋಸೆಫ್ ತಲಾ ಮೂರು ವಿಕೆಟ್ ಕಿತ್ತರೆ, ಶೆಫರ್ಡ್ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ
ಮಳೆಯ ಕಾರಣದಿಂದ ವಿಂಡೀಸ್ ಗೆ 34 ಓವರ್ ಗಳಲ್ಲಿ 188 ರನ್ ಗುರಿ ನೀಡಲಾಯಿತು. ವಿಂಡೀಸ್ ಪರ ಅಥನಾಜೆ 45 ರನ್, ಕೀಸಿ ಕಾರ್ಟಿ 50 ರನ್ ಗಳಿಸಿದರು. ಕೊನೆಗೆ ರೊಮಾರಿಯೊ ಶೆಫರ್ಡ್ ಅಜೇಯ 41 ರನ್ ಗಳಿಸಿದರು. ವಿಂಡೀಸ್ ತಂಡವು 31.4 ಓವರ್ ಗಳಲ್ಲಿ 191 ರನ್ ಗಳಿಸಿ ಜಯ ಗಳಿಸಿತು.
ಮ್ಯಾಥ್ಯೂ ಫೋರ್ಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಶಾಯ್ ಹೋಪ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮೂರು ಪಂದ್ಯಗಳ ಸರಣಿಯನ್ನು ವಿಂಡೀಸ್ 2-1 ಅಂತರದಿಂದ ವಶ ಪಡಿಸಿಕೊಂಡಿದೆ.