ನಾರ್ತಂಪ್ಟನ್: ಭಾರತದ ಬ್ಯಾಟಿಂಗ್ ವೇಳೆ ಸುರಿದ ಭಾರಿ ಮಳೆಯ ಕಾರಣದಿಂದ ಡಿಎಲ್ ನಿಯಮದಡಿ ಹರ್ಮನ್ ಬಳಗವು ಇಂಗ್ಲೆಂಡ್ ವನಿತೆಯರ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲನುಭವಿಸಿತು.
ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಇಂಗ್ಲೆಂಡ್ ತಂಡಕ್ಕೆ ಬ್ಯುಮಂಟ್ ಮತ್ತು ವ್ಯಾಟ್ ಉತ್ತಮ ಆರಂಭ ಒದಗಿಸಿದರು. ಇಬ್ಬರು ಕ್ರಮವಾಗಿ 18 ಮತ್ತು 31 ರನ್ ಗಳಿಸಿದರು. ನಂತರ ಕ್ರೀಸಿಗೆ ಬಂದ ನಟಾಲಿಯಾ ಸೀವರ್ ಕೇವಲ 27 ಎಸೆತದಲ್ಲಿ 55 ರನ್ ಗಳಿಸಿದರು. ವಿಕೆಟ್ ಕೀಪರ್ ಜೋನ್ಸ್ ಕೂಡಾ 43 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್ ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.
ಭಾರತದ ಪರ ಶಿಖಾ ಪಾಂಡೆ ಮೂರು ವಿಕೆಟ್ ಕಿತ್ತರೆ, ಪೂನಮ್ ಯಾದವ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತ ತಂಡ ಎರಡನೇ ಎಸೆತದಲ್ಲೇ ಶಫಾಲಿ ವಿಕೆಟ್ ಕಳೆದುಕೊಂಡಿತು. ನಂತರ ಸ್ಮೃತಿ ಮಂಧನಾ 29 ರನ್ ಗಳಿಸಿದರೆ ಹರ್ಲೀನ್ ಡಿಯೋಲ್ ಅಜೇಯ 17 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಕಳಪೆ ಫಾರ್ಮ್ ಮುಂದುವರಿಯಿತು ಅವರು ಗಳಿಸಿದ್ದು ಕೇವಲ ಒಂದು ರನ್.
ಭಾರತ 8.4 ಓವರ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದಾಗ ಮಳೆ ಎದುರಾಯಿತು. ಫಲಿತಾಂಶಕ್ಕಾಗಿ ಡಿಎಲ್ ನಿಯಮ ಪಾಲಿಸಿದಾಗ ಭಾರತ ಇನ್ನೂ 18 ರನ್ ಹಿಂದಿತ್ತು. ಹೀಗಾಗಿ ಇಂಗ್ಲೆಂಡ್ ಗೆಲುವು ಸಾಧಿಸಿತು.